ಕಗ್ಗತ್ತಲ ಜಗದಲಿ ಕಾರ್ಮೋಡವು ಕವಿಯಲು,
ಜಗದಂಬರದೆಡೆಯಲಿ ಭೀಮ ತಾರೆ ಉದಿಸಲು,
ದಶ ಕೋಟಿ ತಾರೆಗಳು ಮಿನುಮಿನುಗಿ ನಲಿದವು.
!!ಜೈ ಭೀಮ್, ಜೈ ಭೀಮ್, ಜೈ ಭೀಮ್!!
ಅಸ್ಪೃಶ್ಯರ ಪಾಲಿಗೆ, ಬೀಮರಾವು ಜನಿಸಲು,
ನಿಟ್ಟುಸಿರು ಚೆಲ್ಲಿತು, ಭೂ ಮಂಡಲ ಬೆಳಗಿತು,
ಮುದುಡಿರುವ ಹೂಗಳು ಚೈತನ್ಯವ ಪಡೆಯಿತು.
!!ಜೈ ಭೀಮ್, ಜೈ ಭೀಮ್, ಜೈ ಭೀಮ್!!
ಅಂಧ ಶ್ರದ್ಧೆ ತುಂಬಿದ, ಮಂದ ಬುದ್ಧಿ ಲೋಕದಿ,
ಅಪಮಾನದ ಗೂಡಲಿ, ದೌರ್ಜನ್ಯದ ಮಡುವಲಿ,
ಬೀದಿ ದೀಪದಡಿಯಲಿ , ಕಾದಿರುವ ಕಿಡಿಯದು.
!!ಜೈ ಭೀಮ್, ಜೈ ಭೀಮ್, ಜೈ ಭೀಮ್!!
ಸಾವಿರಾರು ಶೋಷಿತರು, ಊರವರ ಧಿಕ್ಕರಿಸಿ,
ಬಾಯಾರಿದ ಬಡವರು ಚೌದರ್ ಕೆರೆ ಮುತ್ತಿದರು,
ಬೊಗಸೆ, ಬೊಗಸೆ ನೀರನು ಎತ್ತಿ, ಎತ್ತಿ ಕುಡಿದರು.
!!ಜೈ ಭೀಮ್, ಜೈ ಭೀಮ್, ಜೈ ಭೀಮ್!!
ಮನುವಾದಿ ಮಂದಿಯ, ಪಕ್ಷಪಾತಿ ಮಂತ್ರದ
ಅಟ್ಟಹಾಸ, ದಿಟ್ಟತನದಿ ಸುಟ್ಟು ಹಾಕಿ ಗುಡುಗಿದ
ಭೀಮ ಜ್ಯೋತಿ ಉರಿಯಲು ಹೊಂಬೆಳಕು ತುಂಬಿತು.
!!ಜೈಭೀಮ್, ಜೈಭೀಮ್, ಜೈಭೀಮ್!!
ಹೆಂಗಳೆಯರ ಬಾಳಿಗೆ, ಸಮಪಾಲಿನ ದುಡಿಮೆಗೆ,
ಜಾತಿ ಮತವ ಗಣಿಸದೆ, ಸಮಾನತೆಯ ಸಾರಿದ,
ಶತಮಾನದ ಶೋಷಣೆ ಅಂತ್ಯಗೊಳಿಸಿದಾತಾನೆ,
!!ಜೈಭೀಮ್ ಜೈಭೀಮ್ ಜೈಭೀಮ್!!
ಗತಕಾಲ ಮರೆತವಗೆ, ಇತಿಹಾಸ ಅರುಹಿದ,
ಬುದ್ಧ, ಬಸವ ತತ್ವಗಳ, ಮಾನವೀಯ ಮೌಲ್ಯಗಳ
ಸಂವಿಧಾನ ಬರೆಯಲು ಸಮಾನತೆಯ ಮೆರೆದವ.
!!ಜೈಭೀಮ್ ಜೈಭೀಮ್ ಜೈಭೀಮ್!!
ಅನ್ಯ ಧರ್ಮದೆಡೆಯಲಿ, ನೆಲಮೂಲ ಸಂಸ್ಕೃತಿ
ಮುದುಡಿ ಮುರುಟಿ ಹೋಗಲು, ಬುದ್ಧ ದಮ್ಮ ತಬ್ಬಿದ,
ಕೊನೆಯುಸಿರನು ಚೆಲ್ಲಲು, ನೀಲಿ ಧ್ವಜವು ಹಾರಿತು.
!!ಜೈಭೀಮ್ ಜೈಭೀಮ್ ಜೈಭೀಮ್!!
ಸಾರ್ವಜನಿಕ ಬದುಕಿಗೆ, ಸರ್ವಶ್ರೇಷ್ಠ ನೀತಿಯ,
ಸಾರ್ವಭೌಮ ರಾಷ್ಟ್ರಕೆ ಸಮಾನತೆಯ ಜ್ಯೋತಿಯ
ಸಂವಿಧಾನ ನೀಡಿದ ಅಂಬೇಡ್ಕರ್ ತತ್ವಕೆ,
!!ಜೈಭೀಮ್ ಜೈಭೀಮ್ ಜೈಭೀಮ್!!
-ಪಾಂಗಾಳ ಬಾಬು ಕೊರಗ
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!