ಇತ್ತೀಚೆಗೆ ನೀಲಕಮಲ್ ಚಿತ್ರದ ಈ ಸುಪ್ರಸಿದ್ಧ ಹಾಡನ್ನು ಮೂಲ ಧಾಟಿಗೆ ಹೊಂದುವಂತೆಯೇ ಪೂರ್ತಿ ಅನುವಾದಿಸಿದ್ದೇನೆ. ಇದು ಹೆಣ್ಣಿನ ಮದುವೆ ಸಂದರ್ಭದಲ್ಲಿ ತಂದೆಯ ಮನಸ್ಸಿನ ಚಿತ್ರ. ಇದು ನನ್ನ 587 ನೇ ಅನುವಾದ.
ಈ ಸಮಯದಲ್ಲಿ ನಮ್ಮ ಹೆಣ್ಣುಮಕ್ಕಳ ಮದುವೆ ಸಮಯದಲ್ಲಿ ತಪ್ಪದೇ ಹಾಡಿ ಅವರನ್ನು ಬೀಳ್ಕೊಡುವ ಕನ್ನಡ ಭಾವಗೀತೆ 'ನಮ್ಮ ಮನೆಯಲ್ಲಿ ಬೆಳೆದೊಂದು ಹೂವನ್ನು ನಿಮ್ಮ ಮಡಿಲೊಳಗೆ ಇರಿಸೆ ತಂದಿರುವೆವು' ನೆನಪಾಗುತ್ತದೆ.
ತಂದೆಯ ಆಶೀರ್ವಾದ ಇದೋ
ನಿನಗೆ ಸುಖಿ ಸಂಸಾರ ಸಿಗಲಿ
ತವರಿನ ನೆನಪೇ ಬಾರದ ಹಾಗೆ
ಅತ್ತೆಯ ಮನೆಯಲ್ಲಿ ಪ್ರೀತಿ ಸಿಗಲಿ
ಸಾಕಿದೆ ನಾನು ನಿನ್ನನ್ನು ಕೇಳು
ಮೊಗ್ಗೆಯ ತರಹ ಹೂವಿನ ತರಹ
ಬಾಲ್ಯದೆ ನಿನ್ನ ತೂಗಿದೆನು
ತೋಳು ನನ್ನದು ಜೋಕಾಲಿಯ ಹಾಗೆ
ನನ್ನಯ ತೋಟದ ನಾಜೂಕು ಹೂವೆ
ಪ್ರತಿ ಕ್ಷಣ ಸಿಗಲಿ ಹೊಸ ಚೈತ್ರವೇ
ಯಾವ ಮನೆಗೆ ನಿನ್ನ ಭಾಗ್ಯ ಇಹುದೋ
ಆ ಮನೆಯಲ್ಲಿ ನಿನ್ನದೇ ರಾಜ್ಯ ಇರಲಿ
ತುಟಿಯಲಿ ಎಂದೂ ಇರಲಿ ಮುಗುಳುನಗೆ
ತಲೆಯಲ್ಲಿ ಸಂತೋಷದ ಕಿರೀಟ ಇರಲಿ
ಜ್ಯೋತಿಯು ಎಂದೂ ಕಡಿಮೆಯಾಗದು
ನಿಂಗೆ ಅಂಥ ಸೌಭಾಗ್ಯ ಸಿಗಲಿ
ನಿನ್ನ ಜೀವನದ ಸಮಯ ಕಳೆಯಲಿ
ಸುಖದ ಸವಿನೆರಳಲ್ಲಿಯೇ
ಮುಳ್ಳು ಕೂಡ ಚುಚ್ಚದ ಹಾಗೆ
ಚಿನ್ನಾ ನಿನ್ನ ಪಾದಕೆ
ಆ ಬಾಗಿಲಿನಿಂದ ದುಃಖ ದೂರ ಇರಲಿ
ಯಾವ ಬಾಗಿಲಲ್ಲಿ ಮುಂದಣ ಭಾಗ್ಯ ಇಹುದು
ತವರಿನ ನೆನಪೇ ಬಾರದ ಹಾಗೆ
ಅತ್ತೆಯ ಮನೆಯಲ್ಲಿ ಪ್ರೀತಿ ಸಿಗಲಿ
ತಂದೆಯ ಆಶೀರ್ವಾದ ಇದೆ
ನಿನಗೆ ಸುಖಿ ಸಂಸಾರ ಸಿಗಲಿ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!