ಹಲವಾರು ತಪ್ಪುಗಳ ಮಾಡುತಲೆ ಹೋದ

ತಿಳಿಸಲು ಬಂದರದು ಸಿಡುಕುತ ಕಾದ

ಅವಸರ ಮಾಡಿದೆನು ಎನುತಲಿ ಸಾಗೆ

ಹೊರಗಿನ ದೇಶದಲಿ ಅಡಗಿದ ಮಾದ

*

ಕನಸುಗಳಿಂದು ಬೀಳುತ್ತಿಲ್ಲವೆಂದರು

ನನಸುಗಳ ನಡುವೆ ಓಡಾಡಿದರು

ಬೇಕಾದುದನೆಲ್ಲ ಪಡೆಯುತ್ತಲೆ ಸಾಗಿ

ಐಷಾರಾಮಿ ಬಾಳಿನಲ್ಲೆ ಬದುಕಿದರು !

*

ಬದುಕಿನ ಭಾವಗಳೇ ಜೀವನದ ಆಟ

ಇಲ್ಲದಿರೆ ಆಗುವುದು ಬಲವಿರದ ಓಟ

ಚಿಂತೆಯನು ಮಾಡದೇ ಚಿಂತನೆಯ ಮಾಡಿ 

ಎಲ್ಲರ ಬಾಳಿನೊಳು ಹೊಸತೊಂದು ಕೂಟ

*

ಬಾಳು ಕತ್ತಲೊಳಗೆಯಿರಲು

ಅಹಂಕಾರ ಜೊತೆಗೆ ಬರಲು

ಬೆಳಕು ಸಿಗದದು ನೋಡಿರೊ

ಅವನತಿ ಮೆಟ್ಟಿಲು ತೋರಲು

*

ಪ್ರೀತಿಯ ಹೃದಯದಾಳದಿ ಇರಲಿ ಸಂಭಾಷಣೆ

ಸವಿ ಸವಿಯೊಳು ಹಿಡಿಯಲಿ ಪ್ರೇರಣೆ

ಪ್ರೇಮ ತುಂಬಿದ ಬದುಕು ಹೀಗೆಯೇ ಸಾಗಲಿ

ಒಡಲೊಳಗಿನ ಜೀವನದಲ್ಲಿರಲಿ ಪೋಷಣೆ

-ಹಾ ಮ ಸತೀಶ ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ