ಅವಧಿ ಕನ್ನಡದಲ್ಲಿರುವ ಅತಿ ಜನಪ್ರಿಯ ಬ್ಲಾಗ್ ಎಂದು ತೋರುತ್ತೆ - ಅಲ್ಲಿರುವ ಹಿಟ್ ಕೌಂಟರ್ ನೋಡಿದರೆ. ಈ ಹಿಂದೊಮ್ಮೆ ಅವರು ನಿಮಗಿಷ್ಟವಾದ ಹತ್ತು ಪುಸ್ತಕದ ಪಟ್ಟಿ ಬರೆಯಿರಿ ಅಂತ ಕೇಳಿದ್ದರು. ನಾನೂ ಬರೆದು ಕಳಿಸಿದ್ದೆ. ಹಾಗಾಗಿ, ___LINK_OPEN_href="http://avadhi.wordpress.com/2007/12/18/%e0%b2%a8%e0%b3%86%e0%b2%a8%e0%b2%aa%e0%b2%bf%e0%b2%a8%e0%b2%bf%e0%b2%82%e0%b2%a6-%e0%b2%9a%e0%b2%bf%e0%b2%ae%e0%b3%8d%e0%b2%ae%e0%b2%bf%e0%b2%a6%e0%b3%8d%e0%b2%a6%e0%b3%81/" target="_blank" title="nenapininda chimmiddu"___ಕೆಲದಿವಸ ಕಳೆದು ನನ್ನ ಪಟ್ಟಿ ಅಲ್ಲಿ ಬಂದಾಗ ನಿರೀಕ್ಷಿತ ಸಂತಸವಾಗಿತ್ತು.
ಗೂಗಲ್ ರೀಡರ್ ನಲ್ಲಿ ಅವಧಿಗೆ ಚಂದಾಯಿಸಿಕೊಂಡವರಲ್ಲಿ ನಾನೂ ಒಬ್ಬ. ದಿನಕ್ಕೊಮ್ಮೆ, ಅಥವಾ ಎರಡು ದಿನಕ್ಕೊಮ್ಮೆ ಅತ್ತಕಡೆ ಹಾದು ಬರುತ್ತೇನೆ. ಹಾಗೆ ಇವತ್ತು ಬೆಳಗ್ಗೆ ಹೋದಾಗ, ಅಲ್ಲಿ ನನ್ನದೇ ಬರಹವನ್ನೊಂದು ನೋಡಿ ಸಂತೋಷ, ಮತ್ತು ಇದನ್ನು ಎದುರುನೋಡದೇ ಇದ್ದಿದ್ದರಿಂದ ಆಶ್ಚರ್ಯ ಎರಡೂ ಆದುವು.
ಈ ಬರಹವನ್ನು ನಮ್ಮೂರಿನಲ್ಲಿ ತೇರು ನಡೆಯುವ ಚಿತ್ರಾ ಪೂರ್ಣಿಮೆಗ ಕೆಲವು ದಿನ ಮೊದಲು ನನ್ನ ಕಂಗ್ಲಿಷ್ ಬ್ಲಾಗ್ ನಲ್ಲಿ ಹಾಕಿದ್ದೆ. ಸಂಪದಿಗರಿಗಾಗಿ, ಆ ಬರಹಕ್ಕೊಂದು ಕೊಂಡಿ ಇಲ್ಲಿ ಕೊಟ್ಟಿದ್ದೇನೆ. :) :)
___LINK_OPEN_href="http://avadhi.wordpress.com/2008/05/15/%e0%b2%ae%e0%b2%a4%e0%b3%8d%e0%b2%a4%e0%b3%86-%e0%b2%b9%e0%b2%97%e0%b2%b2%e0%b3%86%e0%b2%b2%e0%b3%8d%e0%b2%b2-%e0%b2%89%e0%b2%af%e0%b3%8d%e0%b2%af%e0%b2%be%e0%b2%b2%e0%b3%86-%e0%b2%86%e0%b2%9f/" target="_blank" title="ಊರಿನಲ್ಲಿ ತೇರು"___ಮತ್ತೆ ಹಗಲೆಲ್ಲ ಉಯ್ಯಾಲೆ ಆಟ: ಅವಧಿಯಲ್ಲಿ
-ಹಂಸಾನಂದಿ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!