ನೆನ್ನೆಯ ದಿನ ನಾನು ಶಾಲೆಯಿಂದ ಬರುವಾಗ , ಒಬ್ಬಳು ನಿಂತಿರುವುದನ್ನು ನೋಡಿದೆನು , ಅವಳಿಗೆ ಸುಮಾರು ಹತ್ತು ವರ್ಷ ಇದ್ದಿರಬಹುದು . ಅವಳನ್ನು ನಾನು ಕಳೆದ ಒಂದು ತಿಂಗಳಿಂದ ಗಮನಿಸುತಿದ್ದೆ. ಅವಳು ಯಾವಾಗಲೂ ಒಂದೇ ರೀತಿಯ ಬಟ್ಟೆ ಧರಿಸಿಕೊಂಡು ಅದೇ ಮರದ ಬಳಿಯಲ್ಲಿ ಒಬ್ಬಳೇ ನಿಂತಿರುತ್ತಿದ್ದಳು. ನಾನು ನನಗೆ ಧೈರ್ಯತುಂಬಿಸಿಕೊಂಡು ಅವಳ ಕಡೆಗೆ ಹೋಗಲಾರಂಭಿಸಿದೆ . ಅವಳ ದೊಡ್ಡ-ದೊಡ್ಡ ನಯನಗಳು ನನ್ನೆಡೆಗೆ ತಿರುಗಿತು. ನಾನು ಏನಾದರು ಹೇಳುವ ಮುನ್ನವೇ "ಏನು?" ಎಂದು ಪಿಸುಗುಟ್ಟುತ್ತ ಕೇಳಿದಳು. "ನಿನ್ನ ಹೆಸರು?"ಎಂದು ಮೆಲ್ಲನೆ ಕೇಳಿದೆ. "ಭುವಿ" ಎಂದಳು. ಇವತ್ತು ಅವಳು ಆ ಮರದ ಬಳಿ ಇರಲ್ಲಿಲ್ಲ , ಬದಲಾಗಿ ನನ್ನ ಗೆಳತಿ ನನ್ನ ಬಳಿ ಓಡಿ ಬಂದಳು "ಹಾಯ್ ಭುವಿ , ತಗೋ ನಿನ್ನ ನೋಟ್ಸ್" ಎಂದಳು.
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!