ಫೇಸ್ ಬುಕ್ ತೆಗೆದಾಗಲೆಲ್ಲ ಅಲ್ಲಿ ಬರೆದಿರುತ್ತದೆ
What's on ur mind?
ಖಂಡಿತವಾಗಿಯೂ ಅಲ್ಲಿ ಏನೂ ಇಲ್ಲ
ನಿಮ್ಮ ತಲೆಯಲ್ಲಿ ಏನೆದಿಯೋ ಅದೇ ಇದೆ
ಒಂದು ಗ್ಯಾರಂಟಿ
ಖಂಡಿತ ಅದು ಕಾಲಿಯಂತೂ ಇಲ್ಲ
ಖಾಲಿಯಿಲ್ಲವೆಂದ ಮಾತ್ರಕ್ಕೆ ಅದು ಪೂರ್ಣ ತುಂಬಿಯೂ ಇಲ್ಲ
ಅದು ಎಷ್ಟು ಖಾಲಿ ಅಥವಾ ಎಷ್ಟು ತುಂಬಿದೆಯೆಂದು ನಿಖರವಾಗಿ
ಹೇಳಲಾಗುವುದಿಲ್ಲ. ನೀವು ಬೇಕಾದರೆ ಯತ್ನಿಸಬಹುದು
ಅದು ಫೇಸ್ ಬುಕ್ಕಿನ ತರ
ಸಾಮಾಜಿಕ ಸ್ನೇಹತಾಣ
ನಿಯಮಿತವಾಗಿ ಅಪ್ ಡೇಟ್ ಆಗುತ್ತಿರುತ್ತದೆ
ಒಮ್ಮೊಮ್ಮೆ ಇದ್ದಕ್ಕಿದ್ದ ಹಾಗೆ ಆಫ್ ಲೈನ್ ಆಗಿಬಿಡುತ್ತದೆ
ಬರೆಯುತ್ತಾ ಹೋದರೆ ಬರಿದಾಗುವುದಿಲ್ಲ
ನೀವು ಓದುತ್ತಾ ಹೋದರೆ ಮುಗಿಯುವುದಿಲ್ಲ
ಅದು ಆದಿ-ಅಂತ್ಯಗಳಿಲ್ಲದ ಸುದೀರ್ಘ ಕ(ವಿ)ತೆ
ಇಂತೀ ಬೇರೆಯವರವಲ್ಲದವ
ಹರೀಶ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!