ನೆನಪುಗಳ ಜೊತೆ ಬದುಕ ಒಲವೇ ಜೀವನ

ಮನಸುಗಳ ಪಯಣದಲಿ ಚೆಲುವೇ ಜೀವನ

ಉದ್ವೇಗ ತಂಬಿದ ಮಾತುಗಳೇ ಯಾಕೆ 

ಬೆಳಕಿನೊಂದಿಗೆ ಬಾಳುವ ಫಲವೇ ಜೀವನ 

ಶಿಷ್ಟದ ಹೆಸರಿನಲಿ ಮನಕದಡುವ ನೋವು

ಕಳಚಿರುವ ಮನಗಳಲಿ ಬಲವೇ ಜೀವನ

ಭುವಿಗೆ ಬಂದವರು ಗಲ್ಲಿಗೆ ಬರಲೇಬೇಕು

ಚಿತ್ತ ಸಮವಿರುವ ರೂಪಕೆ ಅರ್ಥವೇ ಜೀವನ

ಗೊಡೆಗಳ  ಒಡೆದರೆ ಸಾಧನೆಯೇ ಈಶ

ಆತ್ಮವಿಲ್ಲದವರ ಜೊತೆಗೆ ವಾಸವೇ ಜೀವನ

-ಹಾ ಮ ಸತೀಶ ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ