ಉಗ್ರರು ನುಗ್ಗಿದ್ದಾರೆ ಸರಿ ನಾವು ಹಾಡುತ್ತಿದ್ದೇವೆ ಇಂದು 

ಸಲ್ಲದ ಮಾತ ಹೇಳುತ್ತಾ ಬದಿಗೆ ಸರಿದಿದ್ದೇವೆ ಇಂದು 

ರೋಗ ಇಲ್ಲದೇ ಬಂದಿದೆ ಎನ್ನುತ್ತಾ ಕೂತಿದ್ದೇವೆ ಇಂದು

ಹಳತಾದ ಎಲೆಯಂತೆ ಮತ್ತೆ  ಮುದುಡಿದ್ದೇವೆ ಇಂದು 

ಬಟ್ಟಾ ಬಯಲಿನಲ್ಲಿ ಚೆಂಡೆ ಪೆಟ್ಟ ಕೇಳುತ್ತಿದ್ದೇವೆ ಇಂದು 

ರಚ್ಚೆ ಹಿಡಿದ ಮಗುವ ಸಂತೈಸಲು ಹೊಡೆದಿದ್ದೇವೆ ಇಂದು 

ನಷ್ಟದ ಅಂದಾಜು ಇಲ್ಲದೆಯೇ ಸುಮ್ಮನಿದ್ದೇವೆ ಇಂದು 

ಕಷ್ಟದ ಅರಿವಿ ಮನುಷ್ಯತ್ವವಿಲ್ಲದೆ ನಡೆದಿದ್ದೇವೆ ಇಂದು 

ನಾವಿಂದು ಯಾವ ಸಂತೋಷಕ್ಕಾಗಿ ಸಾಗಿದ್ದೇವೆ ಈಶ

ದ್ವೇಷದ ಭಾರದಿಂದ ಪ್ರೀತಿಯ ಹೀಗೆ ಮರೆತ್ತಿದ್ದೇವೆ ಇಂದು 

-ಹಾ.ಮ ಸತೀಶ ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ