ಕಳೆದುಕೊಳ್ಳದ ಪ್ರೀತಿ ನನ್ನವಳ ಬದುಕು ನಡೆದ ರೀತಿ

ಬರೆಸಿಕೊಳ್ಳದ ಬರಹ ನಮ್ಮವರು ಜೀವನ ಪಡೆದ ರೀತಿ

ಹೊಡೆದುಕೊಳ್ಳದ ಉಸಿರಲಿ ಸುಮ್ಮನೆ ಭಯವೇ ಹೇಳು

ಆತುರದ ಕನಸಿನೊಳು ಇಟ್ಟಿರುವ ಹೊಸತ ತಡೆದ ರೀತಿ

ಹಳಸಿರದ ಕತೆಗಳ ತಿರುವಿ ಹಾಕಿದ ಪುಟಗಳಿಗೆ ಲೆಕ್ಕವುಂಟೆ

ಮಾತಿಲ್ಲದೆ ಹೊಸ ತನಗಳ ನಡುವೆ ನಮ್ಮನ್ನು ಕಡೆದ ರೀತಿ

ಚಿಂತಿಸದೆ ಸಾಗುತಿಹ ಚೇತನ ಜೀವನ ಮೌಲ್ಯಗಳು ಎಲ್ಲಿವೆ

ಹಸಿರಾಗದೆ ಉಳಿದಿಹ ಬದುಕಿನಲ್ಲೂ ಮಗುವ ಹಡೆದ ರೀತಿ

ಹಾರಾಟದ ಬಾಳಿನ ನಡುವೆ ಹೋರಾಡುತ ಸಾಗಿದ ಈಶ

ಚೀರಾಟದ ಹೊತ್ತಿನಲ್ಲೇ ರೂಪವದು ತಟ್ಟನೆ ಒಡೆದ ರೀತಿ

-ಹಾ ಮ ಸತೀಶ ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ