ಸಂಸಾರ ಸೌಧವ ಕಟ್ಟಲೂ ಬೇಕೇ ನನ್ನನು ವರಿಸು ಗೆಳೆಯ 

ಮೋಹದ ಪ್ರೀತಿಯು ನನ್ನಯ ನಡೆಗೆ ಮಧುವನು ತರಿಸು ಗೆಳೆಯ 

ಕೋಟೆಯ ಒಳಗಡೆ ಬಂಧಿ ಆಗುತ ಸುಖವನು ಕಂಡೆಯ ಏನು

ಒಲವಿನ ಸವಿಯು ಮುಗಿದಾ ಸಮಯದಿ ತೃಪ್ತಿಯ ಧರಿಸು ಗೆಳೆಯ 

ಮತ್ತಿನ ನಡೆಯನು ನೋಡುತ ಹೀಗೆ ನಡೆಯುವೆ ಏನು ಇಂದು 

ಮೋಹದ ತುತ್ತಿನ ಮುತ್ತಿನ ಲೆಕ್ಕವ, ಹಾಗೆಯೇ ಇರಿಸು ಗೆಳೆಯ 

ಪರಿಮಳ ಇಲ್ಲದ ಮೈಯಲಿ ಇಂದು, ಸುಗಂಧ ಇರುವುದೆ ದಿನವು 

ರಶ್ಮಿಯು ತುಂಬಿದ ಕಣ್ಣಿನ ಗುಡ್ಡೆಯ, ಮೆಲ್ಲನೆ ಸರಿಸು ಗೆಳೆಯ 

ಮೋಹವು ತುಂಬಿದ ರಾಜನ ಬಳಿಗೆ, ರಮಣಿಯು ಬಂದಳೊ ಈಶ

ಒಲುಮೆಯು ಎಂದಿಹ ರಾಣಿಯ ಎಡೆಗೆ, ನೋಟವ ಹರಿಸು ಗೆಳೆಯ

-ಹಾ.ಮ ಸತೀಶ ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ