ಅರ್ಥಗಳನು ಹುಡುಕುತ್ತಲೇ ಕೊರಗದಿರು

ಅನರ್ಥಗಳು ನಡೆಯುತ್ತಲೇ ಕೊರಗದಿರು

ಮಲಗಿದೆ ಯಾಕೆ ಪ್ರೀತಿಯು ಸಿಗಲಿಲ್ಲವೆ

ಪ್ರೇಮಿಸುವರ ನೋಡುತ್ತಲೇ ಕೊರಗದಿರು

ತುಂತುರಾಗಿರುವ ಮಳೆಯಲ್ಲಿ ಹಾಯಾಗಿರು

ಜೀವನದೊಳಗಲ್ಲಿ ಓಡುತ್ತಲೇ ಕೊರಗದಿರು

ದಟ್ಟವಾಗಿರುವ ಅಡವಿಯೊಳಗೆ ಸಾಗಬೇಡ

ಚೆಲುವೆಯರೆಲ್ಲ  ಹೋಗುತ್ತಲೇ ಕೊರಗದಿರು

ಮೌನವಾಯಿತೆಂದು ಸುಡಬೇಡ  ಸವಿಯನು

ಪೂರ್ಣಚಂದ್ರನನ್ನು ಕಾಣುತ್ತಲೇ ಕೊರಗದಿರು

-ಹಾ ಮ ಸತೀಶ ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ