ಬಿಸಿಲ ಬೇಗೆಯಲ್ಲಿ ಪ್ರೀತಿಯಂತೂ ಅರಳುವುದಿಲ್ಲ ಸಾಕಿ

ಶಶಿಯ ಜೊತೆಯಲ್ಲಿ ಹೊತ್ತಂತೂ ಹೋಗುವುದಿಲ್ಲ ಸಾಕಿ

ತಪ್ಪುಗಳು ಆದಾಗ ಎಂದೂ ನಿನ್ನನ್ನೇ  ದೂಷಿಸುತ್ತಾರೆ ಏಕೆ

ಹುಡುಕುತ್ತಿದ್ದೆ ಅಮಲಿನ ಸ್ವರಗಳು ಸಾಯುವುದಿಲ್ಲ ಸಾಕಿ

ಚಂದ್ರ ತಾರೆಯ ಸನಿಹಕಿಂದು ಕರೆದೋಯ್ದು ಆಯ್ತೇನು

ಅಪ್ಪಿಹಿಡಿಯುವ ಕಾಲವು ಇನ್ನಂತೂ ಬರುವುದಿಲ್ಲ ಸಾಕಿ

ಹೊತ್ತು ಕಂತಿದರೆ ಮನೆಯ ತುಂಬಾ ಹೆಗ್ಗಣಗಳು ಬಂದಿವೆ 

ತುತ್ತು ಕೂಳಿಗೂ ಕೈಗಳು ಯಾವತ್ತೂ ಸಿಗುವುದಿಲ್ಲ ಸಾಕಿ

ವಯಸ್ಸು ಮಾಗಿದೆಯೀಗ ಮತ್ತೆ ಇನ್ನೇನ ಹೇಳಲಿ ಈಶ

ದಯೆಯಿಲ್ಲದ ಸ್ಥಳದಲ್ಲಿ ನಾನು ಮಲಗುವುದಿಲ್ಲ ಸಾಕಿ

-ಹಾ ಮ ಸತೀಶ ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ