ಸುತ್ತ ಮುತ್ತಲು ಕಪ್ಪು ಕತ್ತಲೆಯಿಂದು ತುಂಬಿದೆಯಾ ಗೆಳೆಯ

ಅತ್ತ ಇತ್ತಲು ಎತ್ತಲು ಒಪ್ಪದ ಹಿಡಿತವೆ ಕಂಡಿದೆಯಾ ಗೆಳೆಯ

ಮಲ್ಲಿಗೆಯ ಬನದಲ್ಲಿ ಪರಿಮಳದ ಕಂಪು ಹರಡದೆ ಇದ್ದೀತೆ

ಮೆಲ್ಲಗೆ ಹತ್ತಿರವೆ ಪ್ರೀತಿಯು ಓಡುತ ಬಂದಿದೆಯಾ ಗೆಳೆಯ

ಹಿಮವು ತುಂಬದ ನೆಲದಲು ಒಲವು  ಪಸರಿಸಿದೆ ನೋಡು

ಉಸಿರ ಹಸಿರಿನ ಚೆಲುವಿನೊಳು ಒಲವು ನಿಂತಿದೆಯಾ ಗೆಳೆಯ

ಬಾನು ಬುವಿಯಂತೆ ನನ್ನವಳ ಒಡನಾಟ ಹೀಗೆಯೇ ಸಾಗಲಿ

ಕೈಹಿಡಿದ ನನಸದುವು ಸವಿಗೆ ಹಿತವ ತಂದಿದೆಯಾ ಗೆಳೆಯ

ಮನದೊಳಗೆ ಹೊಸತಾದ ಬಗೆಯನು ತುಂಬಿ ಸಾಗಿದೆ ಈಶ

ಹಳೆಯ ಕೊಳಕಿನ  ನಡೆಯು ಮೆಲ್ಲನೆ ಕಂತಿದೆಯಾ ಗೆಳೆಯ

-ಹಾ .ಮ ಸತೀಶ ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ