ಮುನಿಸಿ ಹೋದಳೆ ಹೊಸಿಲ ದಾಟಿ ಬಹುದೂರ ಹೀಗೆ 

ಕನಸಿನೊಳಗಿನ ನನಸು ಕಂಡರೂ  ಕ್ಷಣದೂರ ಹೀಗೆ 

ಬೆಯಿಸದ ಯಾವ ವಸ್ತುವನ್ನೇ ಮೂಸಿ ನೋಡದವಳು 

ನನ್ನೊಲವ ಸಾಂಗತ್ಯ ಸ್ವೀಕರಿಸದೆ  ಮನದೂರ ಹೀಗೆ 

ಬದುಕು ಬಿರುಗಾಳಿಗೆ ಸಿಲುಕಿದರೂ ನೀ ಕಾಯಲಿಲ್ಲ

ಒಡಲ ಚೆಲುವಾಸೆ ಜೊತೆಗಿದ್ದರೂ ಸವಿದೂರ ಹೀಗೆ 

ಬದುಕ ಕತ್ತಲೆಯ ಕೋಟೆಯೊಳಗೆ ತಣ್ಣಗೆ ಮಲಗಿರುವೆ

ಬತ್ತಿರುವ ಕಣ್ಣಿನ ಸತ್ತ ಬಸಿರೊಂದಿಗೆ ಹುಸಿದೂರ ಹೀಗೆ 

ಹುಚ್ಚುತನಗಳ ಬಯಕೆ ಚಿಗುರಿದವು ಮಡಿಲಲ್ಲಿ ಈಶ

ಕಚ್ಚದಿಹ ವಾತ್ಸಲ್ಯ ಪಥಕ್ಕೆ ಬರುವೆಯಾ ವಸಿದೂರ ಹೀಗೆ 

-ಹಾ ಮ ಸತೀಶ ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ