ದೇಶದ ಒಳಗೆ ಉಗ್ರರು ನುಗ್ಗಿದ್ದಾರೆ, ನಾವೆಲ್ಲ ಹಾಡುತ್ತಿದ್ದೇವೆ ಇಂದು 

ಸಲ್ಲದ ಮಾತನು ಹೇಳುತ ಸಾಗುತ, ಮರೆಗೆ ಸರಿದಿದ್ದೇವೆ ಇಂದು 

ರೋಗ ಇಲ್ಲದೆ ಬಂದಿದೆ ಎನ್ನುತ, ಹೊರಗೆ ಕೂತಿದ್ದೇವೆ ಇಂದು

ಹಳತು ಎಲೆಯಂತೆ ಜೀವನದಲ್ಲಿ, ಮತ್ತೆ ಮುದುಡಿದ್ದೇವೆ ಇಂದು 

ಬಟ್ಟಾ ಬಯಲಲಿ ಚೆಂಡೆಯ ಪೆಟ್ಟನು, ಕೇಳುತ್ತಿದ್ದೇವೆ ಇಂದು 

ಸುಮ್ಮನಿರುವ ಮಗುವನು ಹಿಡಿದು, ನನಸಲಿ ಹೊಡೆದಿದ್ದೇವೆ ಇಂದು 

ನಷ್ಟದ ಅಂದಾಜು ಇಲ್ಲದೆಯೇ, ನಾವೆಲ್ಲ ಸುಮ್ಮನಿದ್ದೇವೆ ಇಂದು 

ಕಷ್ಟದ ಅರಿವನು ಮರೆಯುತ್ತಲೇ, ಸೊಕ್ಕಿನಲಿ ನಡೆದಿದ್ದೇವೆ ಇಂದು 

ಯಾರ ಸಂತೋಷಕ್ಕಾಗಿ ಹೀಗೆಯೇ ಮುಂದೆ ಸಾಗಿದ್ದೇವೆ ಇಂದು 

ದ್ವೇಷದ ಕಿಡಿಯೊಳು ಪ್ರೀತಿಯ, ಬೇಕೆಂದು ಮರೆತ್ತಿದ್ದೇವೆ ಇಂದು

-ಹಾ.ಮ ಸತೀಶ ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ