ಚಿಗುರದಿರುವ ಜೀವನದೊಳಗೆ ಒಲುಮೆಯಿಂದು ಮೂಡಲಿಲ್ಲ ಗೆಳತಿ
ಐಶ್ವರ್ಯ ತುಂಬಿದ್ದರೂ ಬದುಕಲ್ಲಿಯ ಗೆಲುವದು ಹಾಡಾಗಲಿಲ್ಲ ಗೆಳತಿ
ಇಂದಲ್ಲ ನಾಳೆ ಸರಿಯಾಗುವ ಪ್ರಯತ್ನವು ಸೋಲುತ ಹೋಯಿತೇಕೆ
ಬೇಸರದಾಳದ ಧ್ವನಿಯೊಳಗೆ ಭಾವನೆಯದು ಉಸಿರಾಡಲಿಲ್ಲ ಗೆಳತಿ
ಚಿಂತೆಗಳೆನ್ನುವ ಚಿತೆಗಳ ನಡುವೆ ಹೀಗೆ ಪಯಣಿಸುವ ನಾವಿಕನಾಗಿಹೆ
ಸಂಘರ್ಷದ ಜೀವನ ಪಯಣ ಹೀಗೆಯೇ ಮುಂದೆ ಸಾಗಲಿಲ್ಲ ಗೆಳತಿ
ಬಯಕೆ ಮೂಡದೆ ಹೊಂಬಿಸಿಲು ಉದಯಿಸಿದರೆ ಪ್ರಯೋಜನವೇನು
ಹೊಂಗಿರಣದ ಚೆಲುವಲಿ ಘಮ್ಮೆನ್ನುವ ಮನವು ಸವಿಯಾಗಲಿಲ್ಲ ಗೆಳತಿ
ಚೈತ್ರದ ಆಗಮನದ ನಿರೀಕ್ಷೆಯಿರದೆ ಹೃದಯವು ಅಳುತಿದೆಯಲ್ಲ ಈಶಾ
ಮತಿಹೀನರ ನಡುವೆಯೇ ಉಪಚರಿಸದೆ ತನುವು ಅರಳಲಿಲ್ಲ ಗೆಳತಿ
-ಹಾ ಮ ಸತೀಶ ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!