ಹಾಗೆ ಬಂದು ಹೀಗೆ ಹೋದೆ,ನಾನು ಇಂದು ಮಲಗಿದೆ

ಎಷ್ಟೋ ಬಗೆಯ ನೋವನೆಲ್ಲ, ಅಷ್ಟೂ ತಿಂದು ಮಲಗಿದೆ 


ಮುತ್ತಿನಂಥ ಮಾತು ಹೇಳಿ,ಮತ್ತೆ ದೂರ ಹೋದೆಯಾ 

ಶಕ್ತಿ ಇರುವ ದೇಹ ಜೊತೆಗೆ,ಅಲ್ಲೆ ಅಂದು ಮಲಗಿದೆ 


ಜಾತಿ ನೋಡಲಿಲ್ಲ ನಾನು, ಪ್ರೀತಿ ಹುಡುಕಿ ಅಲೆದೆನು 

ಒಲುಮೆ ಸಿಗದೆ ಸೋತ ಮನದಿ, ಮತ್ತು ಬಂದು ಮಲಗಿದೆ 


ರಾತ್ರಿ ನಡುವೆ ನೀನು ಬರುವೆ, ತಬ್ಬಿ ಹಿಡಿದೆ ಮೆಲ್ಲನೆ 

ಕನಸು ಎಂದೂ ತಿಳಿದ ಕ್ಷಣದಿ,ಮರುಗಿ ನೊಂದು ಮಲಗಿದೆ 


ಜೀವನದಿ ಬಾಗಿ ಹೋದೆ,ಸುಖವು ಸೊರಗಿ ಈಶ 

ಮೌನವೊಂದೆ ಬದುಕ ಮಂತ್ರ,ಹೃದಯ ಬೆಂದು ಮಲಗಿದೆ 


-ಹಾ. ಮ ಸತೀಶ ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ