ಸ್ವಾತಂತ್ರ್ಯದ ನಿಲುವಿಗೆ ಏನಾಯಿತು
ಪ್ರಜಾಪ್ರಭುತ್ವದ ಮೆಟ್ಟಿಲಿಗೆ ಏನಾಯಿತು
ನನ್ನಿಂದಲೆನ್ನುವ ಮನಸ್ಥಿತಿಯು ಬೇಕೇನು
ಗದ್ದುಗೆಯಲ್ಲಿಹ ನಾಯಕನಿಗೆ ಏನಾಯಿತು
ಬೆನ್ನೆಲುಬನ್ನೇ ಮುರಿಯುವ ಯತ್ನಗಳು
ಅಟ್ಟಾಡಿಸುವ ಅಧಿಕಾರಿಗೆ ಏನಾಯಿತು
ಬಡವರೆಲ್ಲರ ಧ್ವನಿಯನ್ನು ತುಳಿದಿದ್ದಾರೆ
ಅವರಿಗಿರುವ ಯೋಜನೆಗೆ ಏನಾಯಿತು
ಈಶನೆನ್ನುವ ಹೆಸರೇಳಿಯೇ ಸಾಗಿದ್ದಾರೆ
ಬದುಕುವ ಸಾಮಾನ್ಯನಿಗೆ ಏನಾಯಿತು
-ಹಾ .ಮ ಸತೀಶ ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!