ಕನಸನ್ನು ಹೊರುತ ಸಾಗಿದ ನೌಕೆಗೆ ಅಲೆಗಳ ಭಯವೇತಕೆ

ನನಸು ಮೂಡಿ ಹಾಡಿದಾಗ ಬದುಕಿಗೆ ಕಿಡಿಗಳ ಭಯವೇತಕೆ

ತೆಗಳಿಕೆಯ ನಡುವೆಯೆ,ಮನವು ಹೀಗೆ ಸಾಗದಿರಲಿ ಎಂದಿಗೂ 

ಹೊಗಳಿಕೆಯ ತೇರನ್ನು ಎಳೆವಾಗ, ಸ್ವಾರ್ಥಿಗಳ ಭಯವೇತಕೆ

ಸ್ನೇಹದೊಡನೆ ಸೋಲೆಂದು ಬರದಿರಲಿ,ಚೆಲುವಿಗೆ ಗೆಲುವಿರಲಿ 

ಹರುಷ ಎನ್ನುವ ಸುಖದ ಜೊತೆಗೇ, ಹಿಂಸೆಗಳ ಭಯವೇತಕೆ

ಹಿತ ಚಿಂತಕರ ಸ್ವಾಗತದ ನಲಿವೆಂದೂ ನಮ್ಮಲಿ ಅರಳಲಿ ಸತತ

ಸಾರ್ಥಕ ಸಹನೆಯ ಸರಳ ಸಾಧನೆಗೆ,ದ್ರೋಹಿಗಳ ಭಯವೇತಕೆ

ಸಾಮರಸ್ಯದ ನಡೆಯು, ಸಜ್ಜನಿಕೆಯ ಸಕ್ರಮ ಗಣಿಯು ಈಶ

ಸಚೇತನ ಪಯಣದ ಸಬಲೆಯ  ಛಲಕೆ,ಜಂತುಗಳ ಭಯವೇತಕೆ

-ಹಾ ಮ ಸತೀಶ ಬೆಂಗಳೂರು