ಕನಸು ಮೂಡಿ ನನಸು ಚಿಗುರೆ ಎಲ್ಲಿ ಇರುವೆ ಶ್ಯಾಮ
ಮನದ ಸುತ್ತ ನೀನೆ ಸೇರೆ ಮೆಲ್ಲ ಬರುವೆ ಶ್ಯಾಮ
ನಿತ್ಯ ನೇಮ ನಡತೆಯಿರಲು ಮಿಥ್ಯ ಪದವಿ ಏತಕೆ
ಒಲುಮೆ ಸುರಿಯೆ ತನುವು ಅರಳೆ ಪ್ರೀತಿ ಗುರುವೆ ಶ್ಯಾಮ
ಭಾವ ಬಿಂದು ಒಂದು ಆಗೆ ಕಷ್ಟವೇಕೆ ಎಂದಿಗು
ಚೆಂದದಿಂದ ಒಲುಮೆ ಹೊಮ್ಮೆ ಪ್ರೇಮ ಸುರುವೆ ಶ್ಯಾಮ
ಬಾನ ಬಯಲ ತಾರೆ ಚೆಂದ ಚಂದ್ರನೊಲುಮೆ ಬಾಗಿದೆ
ಹಸಿರು ಕಂಡ ನೆಲದ ಸವಿಗೆ ಚಿಬುಕ ಕೊರುವೆ ಶ್ಯಾಮ
ಚಿಂತೆಯಿರದ ಹೃದಯದೊಳಗೆ ಕಾಂತಿ ತುಂಬೊ ಈಶಾ
ಕುಸುಮದೊಳಗೆ ಮೋಹ ಕಂಡೆ ತನುವ ತರುವೆ ಶ್ಯಾಮ
(ಚಿಬುಕ =ಗಲ್ಲ , ಕೊರುವೆ= ಕೊಡುವೆ)
-ಹಾ ಮ ಸತೀಶ ಬೆಂಗಳೂರು
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!