ಬರೆದಿರುವುದೇ ಸಾಹಿತ್ಯ, ಅಂದುಕೊಂಡಂತೆ ಇದ್ದೇವೆ
ಬರೆಯಲಾಗದೇ ಸಾಹಿತಿ, ಅನಿಸಿಕೊಂಡಂತೆ ಇದ್ದೇವೆ
ವ್ಯಂಜನವೊಂದೇ,ಸ್ವರವೇ ಬೇಡ ಎನ್ನುವರಿದ್ದಾರೆಯೇ
ನಾಮ ಪದಗಳನೆಲ್ಲ ದೂಡಿ, ಕಳೆದುಕೊಂಡಂತೆ ಇದ್ದೇವೆ
ಪದ ಸಂದರ್ಭದ ಬಗ್ಗೆ, ಅರಿಯದೆ ತಿರುಳನ್ನೇ ಮುರಿದಿದ್ದೇವೆ
ಗೊತ್ತಿದ್ದರೂ,ಹೊಸ ಹೊಲದಲ್ಲಿ ಕಾಲಿಟ್ಟುಕೊಂಡಂತೆ ಇದ್ದೇವೆ
ಪ್ರಾಸಗಳ ನಡುವೆ,ಓದುಗರಿಗೆ ತ್ರಾಸ ಕೊಟ್ಟು ಸಾಗಿದ್ದೇವೆಯೆ
ಬಲ್ಲೆಗಳ ನಡುವೆ,ಪಾರ್ಥೇನಿಯಂ ಹುಟ್ಟಿಕೊಂಡಂತೆ ಇದ್ದೇವೆ
ಬರೆದಿರುವ ಎಲ್ಲವೂ,ಸಾಹಿತ್ಯವಲ್ಲ ತಿಳುವಳಿಕೆಯಿದೆ ಈಶಾ
ಮೆದುಳ ಬಳಸಿ ಸ್ವಂತ ಬರಹವೆಂದು ಹೇಳಿಕೊಂಡಂತೆ ಇದ್ದೇವೆ
-ಹಾ ಮ ಸತೀಶ ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!