ಅರಳು ನಲ್ಲ ನನ್ನ ಮನದಿ ಪ್ರೀತಿ ನಡೆದ ರೀತಿಯೆ
ಹೊರಳು ಹರಳು ಹುರಿದ ನೀತಿ ಬಂಧ ಪಡೆದ ರೀತಿಯೆ
ಚಿತ್ತ ಕಲಕಿ ಹೋದೆಯಲ್ಲ ಮುತ್ತು ರತ್ನ ಹುಡುಕುತ
ಕತ್ತು ಉಳುಕಿ ನಿಂದೆನಂದು ಹೊತ್ತು ಹಡೆದ ರೀತಿಯೆ
ಜೀವದರಸಿ ನೀನೆಯೆಂದೆ ಕೈಯ ಕೊಟ್ಟು ಹೋದೆಯ
ನಗುವು ಇಲ್ಲ ಉಸಿರ ಕೆಸರು ಹೀಗೆ ಕಡೆದ ರೀತಿಯೆ
ಮೌನ ಜೀಕಿ ಕನಸು ಕರಗೆ ರಾತ್ರಿಯೆಲ್ಲ ವೇದನೆ
ಹುರುಪು ನಶಿಸಿ ಸೊರಗಿದಾಗ ಮತ್ತು ತಡೆದ ರೀತಿಯೆ
ಗಾನವಿಲ್ಲ ಮೋಹವಿಲ್ಲ ಬರಡು ನೆಲದಿ ಈಶನೆ
ಕಣ್ಣ ಹನಿಯ ನೋಡ್ವರಿಲ್ಲ ಗೆಳೆಯ ಹೊಡೆದ ರೀತಿಯೆ
-ಹಾ ಮ ಸತೀಶ ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!