ಯೌವನದ ಪಿಸು ಮಾತಿನೊಳು ಗೋಡೆಗಳಿಗೂ ಕಿವಿಯಿದೆ

ಹೊರಳಾಟದ ಒಳಗಿನ ನರಳಿಕೆಗೆ ಕಿಟಕಿಗಳಿಗೂ ಕಿವಿಯಿದೆ 

ಬೆಸುಗೆಗಳ ನಡುವೆ ಅಂತರ್ ಯುದ್ಧಗಳ ಕಟು ಹೋರಾಟ

ವರನ ಬಾಯಾರಿದ ಹುಟ್ಟುಗಳಲ್ಲಿ ಮಂಟಪಗಳಿಗೂ ಕಿವಿಯಿದೆ 

ಅತಿಯಾದ ಮೋಹ ಬಿರುಕುಗಳ ಮಹಾ ನದಿಗಳಲ್ಲಿ ಸೋಲು

ಸಪ್ತಪದಿಯ ರೀತಿ ಹೋಗದಿರೆ ರಂಗೋಲಿಗಳಿಗೂ ಕಿವಿಯಿದೆ

ಮುತ್ತುಗಳ ಮತ್ತಿನಲ್ಲಿ ಕಾಲ ಕರೆದೊಯ್ದಂತೆ ಸಾಗುತ್ತೇವೆ ದೂರ

ಚೈತ್ರದೊಳಗಿನ ಅಮಲಿನಾಳದ ಸುಖದ ಕನಸುಗಳಿಗೂ ಕಿವಿಯಿದೆ 

ಮುಂಜಾವಿನ ಸವಿ ನನಸಿನ ನಿದಿರೆಯಲ್ಲೂ  ಮೌನ ಪಾಠವು ಈಶ

ಚೆಲು ಮೋಹದ ತಂಗಾಳಿಯ ಒಡಲೊಳಗಿನ ಕಿರಣಗಳಿಗೂ ಕಿವಿಯಿದೆ 

-ಹಾ ಮ ಸತೀಶ ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ