ಬರಹಗಾರರು ಬರೆದದ್ದೆಲ್ಲ ಸಾಹಿತ್ಯವಲ್ಲ ಶಿಷ್ಯ
ನಾವುಗಳು ಹೋದದ್ದೆಲ್ಲ ದಾರಿಯಲ್ಲ ಶಿಷ್ಯ
ಕನಸುಗಳು ಎಲ್ಲಾ ನಮ್ಮೊಳಗಿನ ಬದುಕೇನು
ಅಹಂನವರು ಹೇಳಿದ್ದೆಲ್ಲ ವೇದವಲ್ಲ ಶಿಷ್ಯ
ಹೊಸಬರನ್ನು ಅಳೆಯದೇ ಪ್ರೋತ್ಸಾಹಿಸಿ
ಮರಗಿಡಗಳು ಕೊಟ್ಟದ್ದೆಲ್ಲ ಹಣ್ಣುಗಳಲ್ಲ ಶಿಷ್ಯ
ಬುರುಡೆ ಬಿಡುವರನ್ನು ಎಂದೂ ದೂರವಿಡಿರೊ
ಹತ್ತಿರದಿಂದ ಬೈದದ್ದೆಲ್ಲ ವಿರೋಧವಲ್ಲ ಶಿಷ್ಯ
ಈಶನಲ್ಲಿರುವ ಪ್ರತಿಭೆಗಿಂದು ಬೆಲೆಯಿದೆ ಏನು
ಜಾಣರಿಂದು ಪಡೆದದ್ದೆಲ್ಲ ಸ್ವಂತದಲ್ಲ ಶಿಷ್ಯ
-ಹಾ ಮ ಸತೀಶ ಬೆಂಗಳೂರು
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!