ಬರವಣಿಗೆಯು ಕನ್ನಡದಲ್ಲಿರಲಿ ಮಗು
ಮಾತುಗಳೆಲ್ಲ ಸ್ಪಷ್ಟವಾಗಿರಲಿ ಮಗು
ಕತ್ತೆಗಳೂ ಒದೆಯುತ್ತವೆ ಅರಿಯು
ವ್ಯವಹಾರವು ಹಿಡಿತದಲ್ಲಿರಲಿ ಮಗು
ಜೀವನವಿಂದು ಮುಗಿಯದಿಹ ದಾರಿ
ಬದಲಾವಣೆ ಬದುಕಿನಲ್ಲಿರಲಿ ಮಗು
ಒಪ್ಪಂದಗಳೆಲ್ಲ ಸುಖವನ್ನು ಕಾಣಲಿ
ಕಲಿಕೆಯಲ್ಲೀಗ ಸತ್ಯತೆಯಿರಲಿ ಮಗು
ಜಾತಿಗಳೆನ್ನುವ ವಿಂಗಡನೆಯೇಕೆ ಈಶ
ದ್ವೇಷವೆಂದೂ ಸುಳಿಯದಿರಲಿ ಮಗು
-ಹಾ ಮ ಸತೀಶ ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!