ಕಣ್ಣಲ್ಲಿ ಕಣ್ಣಿಟ್ಟು ನೀನೊಮ್ಮೆ ನನ್ನ ನೋಡು 

ಕೈಹಿಡಿದು ನಡೆಸುತ್ತ ಹೀಗೊಮ್ಮೆ ನನ್ನ ನೋಡು 


ಕಣ್ಣೀರು ಹರಿಸುತ್ತ ಅಲ್ಲೇ ಇಂದು ನಿಂತೆ ಯಾಕೆ 

ಒಡಲ ಸವಿಯ ಹರಿಸಿ ಬಂದೊಮ್ಮೆ ನನ್ನ ನೋಡು 


ಪಸಲು ಬರದ ಕಡೆಯಲ್ಲೆಲ್ಲ ಹೋಗುವಿಯೇನು 

ಕನಸು ಕರಗಿ ನನಸಿರಲು ನಿಂದೊಮ್ಮೆ ನನ್ನ ನೋಡು 


ಹುಚ್ಚು ಬಿಡದು ಕೆಲವರಲ್ಲಿ ಪುರಾಣವು ಬೇಕೇನು 

ಪ್ರೇಮವು ಮಧುವ ತರಲು ಮತ್ತೊಮ್ಮೆ ನನ್ನ ನೋಡು 


ರಾಗ ದ್ವೇಷ ಏಕೆ ಹೀಗೆ ನೀನೀಗ ಹೇಳು ಸವಿಯೆ

ಬಸಿರ ಬಯಕೆ ಬೇಡವೇ ಕುಳಿತೊಮ್ಮೆ ನನ್ನ ನೋಡು 

-ಹಾ. ಮ ಸತೀಶ ಬೆಂಗಳೂರು