ನಾನು ಸರಿ ನೀನು ಸರಿಯಿಲ್ಲ, ಎನ್ನುವರಿಂದ ಪಾಠವೇ 

ನೀನು ಸರಿ ನಾನು ಸರಿಯಿಲ್ಲ, ಹೇಳುವರಿಂದ ಪಾಠವೇ 


ಅನುಭವದ ಅರಿವಿಲ್ಲದೇ,ಆಡುವ ಮಾತು ಬೇಕೇ 

ಜೊತೆ ನಿಲ್ಲಲು ಯೋಗ್ಯತೇ, ಕಳೆವರಿಂದ ಪಾಠವೇ


ಕಟ್ಟಿ ಕೊಟ್ಟ ಬುತ್ತಿಯನ್ನ,ಎಷ್ಟು ದಿನಕೆ ಉಳಿದಿತೋ 

ಎಲ್ಲವಿಂದು ನನ್ನೊಳೆಂದೂ, ಎಂಬುವರಿಂದ ಪಾಠವೇ


ಹೃದಯದೊಳಗೆ ಬರಿಯ ದ್ವೇಷ, ಹೊರಗೆ ಸ್ನೇಹವೇಕೆ

ನನಸಿನಲ್ಲೂ ವ್ಯಥೆಯ ಕೊಟ್ಟು, ನಗುವರಿಂದ ಪಾಠವೇ


ಬತ್ತಿ ಹೋದ ಮನವು ಇಂದು, ಚಿಗುರಬಹುದೆ ಈಶ

ಸತ್ತ ಒಲುಮೆಯನ್ನು ಹೊತ್ತು, ತರುವರಿಂದ ಪಾಠವೇ 

ಹಾ. ಮ ಸತೀಶ ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ