ಒಂದು ದಿನ ನಾವೂ ಸಾವ ಕಾಣಲೇ ಬೇಕು

ಸಾವಿನೊಳು ಸಾರ್ಥಕ್ಯವನು ಹೊಂದಲೇ ಬೇಕು

ಚಿಂತೆಯನು ಮೈಯೊಳಗೆ ತುಂಬಿ ಬದುಕುವುದೇಕೆ

ಸಂತೆಯೊಳು ಮಲಗಿದರೂ ನಗು ಬೀಗಲೇ ಬೇಕು

ನನಸೆನುವ ಕನಸಿನಲಿ ಬಹುದೂರ ಸಾಗಿದೆನು

ಮಾಯ ನಗರಿಯ ನಡುವೆ ನಾ ಹೋಗಲೇ ಬೇಕು

ಹುಟ್ಟು ಸಾವಿನ ನಡುವೆ ಸೆಳೆತದ ಹೊಡೆತಗಳು

ಕಟು ಮಾತಿನ ಎಡೆಯಲಿ ತಲೆ ಬಾಗಲೇ ಬೇಕು

ಹಸಿರ ಉಸಿರಿನ ಜೊತೆ ಮುಂದೆ ನಡೆಯೋಣ ಈಶ

ಕಷ್ಟದ ಸರಮಾಲೆಯಲಿ ಜೀವ ಸಾಗಲೇ ಬೇಕು

-ಹಾ.ಮ. ಸತೀಶ್, ಬೆಂಗಳೂರು