ದೂರುವುದೇ ಅವನ ಚಟವಾದರೆ, ದೂರವಿರು 

ಬೈಯುವುದೇ ಅವನ ಕೆಲಸವಾದರೆ, ದೂರವಿರು

ಕನಸಿಲ್ಲದವನ ಜೊತೆಯಲ್ಲಿ, ಸಾಗುವುದು ಯಾಕೋ

ತಾನೆನ್ನುವುದೇ ಅಂತಿಮ, ದಿಟವಾದರೆ ದೂರವಿರು 

ಯಾತ್ರೆ ಅವನಿಗೆ ಏನ ತಿಳಿಸಿ ಕೊಡುವುದೋ  ತಿಳಿಯೆ

ಹುಳಿಹಿಂಡಿದ್ದೇ ಮನದಾಳದಿ, ಗೆಲುವಾದರೆ ದೂರವಿರು 

ತನ್ನ ನುಡಿಯೇ ವೇದವು, ಎನ್ನುವಗೆ ನಾನು ಏನನ್ನಲಿ 

ನನ್ನಿಂದಲೆ ಎನ್ನುವನದ್ದೇ,ಹಟವಾದರೆ ದೂರವಿರು

ನೆಮ್ಮದಿ ಹುಡುಕಿ ಹೋಗುವವನ, ನೋಡುತಿರು ಈಶ

ದ್ವೇಷವೇ ಬೇರೆಯವನಿಗೆ, ವರವಾದರೆ ದೂರವಿರು 

-ಹಾ ಮ ಸತೀಶ ಬೆಂಗಳೂರು