ಅತ್ತಯಿತ್ತ ಸಂಜೆಯಾಗಲು, ಒಲವನ್ನು ತಬ್ಬಿಕೊಂಡು
ಬಾನದಾರಿ ರಂಗು ಏರಲು, ಸುಮವನ್ನು ತಬ್ಬಿಕೊಂಡು
ನೆಲದೊಳಗೆ ನೆರಳಿನ ಹರವು, ಮುಸುಕಿನ ಛಾಯೆಯು
ತಂಪುಗಾಳಿ ಮೆಲ್ಲನೆ ಬೀಸಲು, ಗೆಲುವನ್ನು ತಬ್ಬಿಕೊಂಡು
ಹೆಣ್ಣಮೇಲೆ ಮಾಯೆಯ ಹರಡಿ, ಮದನ ಬಂದನಿಂದು
ನೀರೆಸೆರಗು ನೆಲವ ಮುಟ್ಟಲು, ಸುಖವನ್ನು ತಬ್ಬಿಕೊಂಡು
ಬಂಡೆಮೇಲೆ ಜಾರುವ ನೀರ,ತಕಧಿಮಿತದ ನಡೆಯು
ನಾದ ಉನ್ಮಾದ ಗಳಿಗೇ ಮಧುವನ್ನು ತಬ್ಬಿಕೊಂಡು
ಜೀವನದ ಸವಿಯ ಪಯಣದಿ, ನಡೆದಿಹನು ಈಶ
ಪ್ರೀತಿಯಾಗೆ ಸುತ್ತಲು ಒರತೆ, ತನುವನ್ನು ತಬ್ಬಿಕೊಂಡು
-ಹಾ ಮ ಸತೀಶ ಬೆಂಗಳೂರು
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!