ಜೀವನದ ಕನಸುಗಳು ನಾವು ಹೇಳಿದಂತೇ ಇಲ್ಲ 

ಬದುಕಿನ ನನಸುಗಳು ನಾವು ಕೇಳಿದಂತೇ ಇಲ್ಲ 

ಹುಟ್ಟು ಸಾವಿನ ನಡುವೆ ನಮಗೆ ದ್ವೇಷವು ಬೇಕೆ

ನ್ಯಾಯವು ಸಿಗುವವರೆಗೆ ತಾಳ್ಮೆ ಬೆಳೆದಂತೇ ಇಲ್ಲ 

ಬಲವಾದ ಪ್ರೀತಿಯೊಳು ಜಾತಿ ಬರುವುದೆ ಹೇಳು 

ಹೆತ್ತವರ ಮನನುಡಿಗೆ ಕೂಸು ಮಣಿದಂತೇ ಇಲ್ಲ 

ಉರಿಬಿಸಿಲ ಜೊತೆಗೆ ಮಳೆ ಹನಿಯು ಬರುವುದೆ 

ತಂಪಿರದ ಒಣನೆಲದ ಮಣ್ಣು ಕುಣಿದಂತೇ ಇಲ್ಲ

ಸಿರಿವಂತರ ಮಾತಿಗಿಂದು ಬೆಲೆ ಇದೆಯಾ ಈಶ

ಬಡವರ ಪಾಂಡಿತ್ಯ ಯಾರೂ ಪಡೆದಂತೇ ಇಲ್ಲ 

-ಹಾ.ಮ ಸತೀಶ ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ