ದೇಹಗಳೆರಡೂ ಬೆತ್ತಲಾಗುವುದೇ ನೀ ಹೇಳು ಸವಿ
ಮನಸ್ಸಿನ ಭಾವನೆ ಕೆತ್ತಲಾಗುವುದೇ ನೀ ಹೇಳು ಸವಿ
ಸೌಂದರ್ಯ ನೋಡಿ ಕೈಯ ಹಿಡಿಯದಿರು ನೀನಿಂದು
ಮನಸ್ಸಿನ ಸ್ನೇಹವ ಕಟ್ಟಲಾಗುವುದೇ ನೀ ಹೇಳು ಸವಿ
ಕಾಮದೊಲವಿನ ಲಾಭದ ಜೊತೆಗಿಂದು ಹೋಗದಿರು
ನೆರಳಿರುವ ಕತ್ತಲಿಗೆ ಮರುಳಾಗುವುದೇ ನೀ ಹೇಳು ಸವಿ
ತುಟಿಗಳಲಿ ಒಲವಿದೆ ಎಂಬುವುದನು ಒಪ್ಪಿರುವೆ ಏನು
ಗಿಡದ ಚಿಗುರದು ಹೊರಳಾಡುವುದೇ ನೀ ಹೇಳು ಸವಿ
ದುಂಬಿಗೆ ಗುಲಾಬಿ ಹೂವಿನ ಜೊತೆ ಪ್ರೀತಿಯೇ ಈಶ
ಸಂಬಂಧ ಕೆಟ್ಟರೆ ಜೀವನವಾಗುವುದೇ ನೀ ಹೇಳು ಸವಿ
-ಹಾ ಮ ಸತೀಶ ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!