ಅವಳೆಂದರೆ ಹೀಗೆಯೇ ಪ್ರೀತಿಯ ವಾಣಿ ಅಮ್ಮಾ
ಪ್ರೇಮದಲ್ಲಿನ ಸುಂದರ ಸಿಂಚನದ ಮಣಿ ಅಮ್ಮಾ
ಮಡಿಲಲ್ಲಿ ತಲೆಯಿಟ್ಟು ಮುದದಿ ಮಲಗಿ ನಿದ್ರಿಸಿದೆ
ಮೂರೂ ಜಗವನ್ನೇ ತಿಳಿದ ಮೇಧಾವಿ ಗಿಣಿ ಅಮ್ಮಾ
ನನ್ನನ್ನು ಕನಸಿನ ಲೋಕದಿಂದ ನನಸಿಗೆ ತಂದವಳು
ಆರೈಕೆಯ ಮಾಡಿ ವಿದ್ಯೆಯನು ಕೊಟ್ಟ ಕಣಿ ಅಮ್ಮಾ
ಜೀವನ ಪಾಠವ ಹೇಳುತಲಿ ಸರಿದಾರಿಗೆ ತಂದವಳು
ಬಾಯಾರಿದಾಗ ನೀರನು ಉಣಿಸಿದ ಪಾಣಿ ಅಮ್ಮಾ
ಮಾತ ಮುರಿಯದೆ ಮುಂದಕೆ ಸಾಗಿದವಳು ಈಶ
ಒಲುಮೆಯ ಮಹಾತಾಯಿ ಜನ್ಮದಾತೆ ಗಣಿ ಅಮ್ಮಾ
-ಹಾ ಮ ಸತೀಶ ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!