ಪ್ರಕೃತಿ ಪ್ರೇಮದೊಳು ಒಲವಿನಾ ಬುತ್ತಿ

ಸಹಜತೆಯ ಸವಿಯೆನ್ನ ಚೆಲುವಿನಾ ಬುತ್ತಿ

ಅತಿಯೆನಿಪ ಸ್ವಾರ್ಥವು ನಮಗಿಂದು ಬೇಕೆ

ಆಭರಣ ಸುಂದರಿಯ ಉಳಿವಿನಾ ಬುತ್ತಿ

ಪ್ರತಿಭೆ ಕಾಂತಿಯಯ ಜೊತೆಗೆ ಹುಬ್ಬಿನೋಲೆ

ಗುಳಿಯಿರುವ ಕೆನ್ನೆಯೊಳು ಗೆಲುವಿನಾ ಬುತ್ತಿ

ಅಂದದ ಅರಮನೆಯ ಆಚೆ ಬೃಂದಾವನ

ಅಮೃತದ ಜೊತೆಯಲ್ಲಿ  ತನುವಿನಾ ಬುತ್ತಿ

ಜೊತೆಯಾಗಿ ನಡೆದಿದೆ ಹೋಳಿ ಈಶಾ

ಅಂಬರದ ತಲದಂತೆ ಮಧುವಿನಾ ಬುತ್ತಿ

-ಹಾ ಮ ಸತೀಶ ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ