ವಿಷದ ಗಾಳಿಯ ಹೀರಿ ನೀಡುತಲಿದ್ದೆ ನಿನಗೆ ಶುದ್ಧ ಗಾಳಿಯ
ಹೇ ಮನುಜ ನೀನಿದ ಅರಿಯದೆ ಹೋದೆಯಾ
ವಿಪುಲವಾಗಿ ಬೆಳೆದು ನಾನು ತರುತಲಿದ್ದೆ ಮಳೆಯ
ತಣಿಸುತ ಎಲ್ಲರ ದಾಹಗಳ ಪೊರೆಯುತಿದ್ದೆ ಈ ಇಳೆಯ
ನಾ ನೀಡುತಿಹೆ ಫಲಪುಷ್ಪಗಳ
ಆದರೂ ಕಡಿಯುತಿರುವೆ ನೀನು ಕಾಡುಗಳ
ಕಡಿಮೆಯಾಗುತಿದೆ ಮಳೆಗಳು
ಬತ್ತುತಿವೆ ಜಲ ಮೂಲಗಳು
ನಾಗರಿಕತೆಯ ಹೆಸರಿನಲಿ ನೀನು
ನಾಶ ಮಾಡುತಿರುವೆ ವನವನು
ಕಾಲ ಮಿಂಚುವ ಮುನ್ನ ಇದನರಿತು ನೀನು
ಮರ-ಗಿಡಗಳ ಕಡಿದು ಮಾಡದಿರು ಘಾತವನು
ನಿನ್ನೊಳಿತಿಗೇ ಹೇಳುತಿರುವೆ ನಾ ಇದನನು
ಕಡೆಗಣಿಸದಿರು ನನ್ನೀ ಹಿತ ನುಡಿಯನು
~ಸಂಪಿಗೆ ವಾಸು, ಬಳ್ಳಾರಿ
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!