ಶ್ರೀಧರ ಸೇವಾ ಮಹಾಮಂಡಲದ "ಶ್ರೀಧರ ಸಂದೇಶ"
ಶಿವಮೊಗ್ಗ ಜಿಲ್ಲೆ ಸಾಗರ ವರದಪುರದ ಶ್ರೀಧರಾಶ್ರಮದ ಶ್ರೀ ಶ್ರೀಧರ ಸೇವಾ ಮಹಾಮಂಡಲವು ಕಳೆದ ೨೪ ವರ್ಷಗಳಿಂದ ಪ್ರಕಟಿಸಿಕೊಂಡು ಬರುತ್ತಿರುವ ಧಾರ್ಮಿಕ ಮಾಸಪತ್ರಿಕೆಯಾಗಿದೆ "ಶ್ರೀಧರ ಸಂದೇಶ". ಶ್ರೀಧರಾಶ್ರಮದಲ್ಲಿ ಪತ್ರಿಕಾಲಯವಿದೆ. ಆಸ್ರಮವನ್ನು ನಿರ್ವಹಿಸಿಕೊಂಡುಬರುತ್ತಿರುವ ಮಹಾಮಂಡಲದ ಅಧ್ಯಕ್ಷರು ಪತ್ರಿಕೆಯ ಪ್ರಕಾಶಕರಾಗಿರುತ್ತಾರೆ. ಪ್ರಸ್ತುತ, ಎಂ. ಜಿ. ಕೃಷ್ಣಮೂರ್ತಿ ಪ್ರಕಾಶಕರಾಗಿರುತ್ತಾರೆ. ಇವರಿಗಿಂತ ಮೊದಲು ಎಂ. ಟಿ. ಪರಮೇಶ್ವರ ಅವರು ಪ್ರಕಾಶಕರಾಗಿದ್ದರು.
ಪ್ರಸ್ತುತ, ವಿದ್ವಾನ್ ಗಜಾನನ ಭಟ್ಟ ರೇವಣಕಟ್ಟಾ ಸಂಪಾದಕರು. ಇವರಿಗಿಂತ ಮೊದಲು ಸಂಪಾದಕರಾಗಿದ್ದ ಆರ್. ಎನ್ ಶಾಸ್ತ್ರಿ ಅವರು ಈಗ ಗೌರವ ಸಂಪಾದಕರು. ಜಿ. ಟಿ. ಶ್ರೀಧರ ಶರ್ಮಾ, ಜಿ. ತಿರುಮಲ ಶರ್ಮಾ, ಪಿ. ಆರ್. ಕೃಷ್ಣಮೂರ್ತಿ, ಬಿ. ಜಿ. ಮಂಜಪ್ಪ, ಸೀತಾರಾಮ ಹೆಗಡೆ ಕೊಳಗಿ, ವಿದ್ವಾನ್ ಪುನೀತ ಕೆ. ಎಸ್., ವಿದ್ವಾನ್ ಸುಬ್ರಹ್ಮಣ್ಯ ಜಿ. ಎಂ. ಹಾಗೂ ಸಂದೀಪ ಡಿ. ದೀಕ್ಷಿತ ಸಂಪಾದಕ ಸಲಹಾ ಮಂಡಳಿ ಸದಸ್ಯರು. ಅಶೋಕ ಕೆ. ಜಿ. ಹಾಗೂ ಮಧು ಎಂ. ಎಸ್. ನಿರ್ವಾಹಕರು.
ಪುಸ್ತಕ ರೂಪದಲ್ಲಿ ಪ್ರಕಟಗೊಳ್ಳುತ್ತಿರುವ ಶ್ರೀಧರ ಸಂದೇಶ ೩೬ ಪುಟಗಳನ್ನು ಹೊಂದಿದೆ. ಸಾಗರದ ಸದ್ಗುರು ಪ್ರಿಂಟರ್ಸ್ ನಲ್ಲಿ ಮುದ್ರಣವಾಗುತ್ತಿದೆ. ಪತ್ರಿಕೆಯ ಬಿಡಿ ಸಂಚಿಕೆಯ ಬೆಲೆ ೧೫ ರೂಪಾಯಿಗಳು. ವಾರ್ಷಿಕ ಚಂದಾ ೧೫೦/-, ನಾಲ್ಕು ವರ್ಷದ ಚಂದಾ ೫೦೦/-, ಆಜೀವ ಚಂದಾ ೨೦೦೦/- ಮತ್ತು ಪೋಷಕರಾಗಲು ೫೦೦೦/- ರೂಪಾಯಿಗಳಾಗಿವೆ.
ಶ್ರೀ ಶ್ರೀಧರ ಸ್ವಾಮಿಗಳ ಸಾಹಿತ್ಯ - ಸಂದೇಶ, ಅದ್ಯಾತ್ಮಿಕ, ಧಾರ್ಮಿಕ, ಸಾಂಸ್ಕೃತಿಕ, ಭಕ್ತಿ, ಜ್ಞಾನ, ವೈರಾಗ್ಯವೇ ಮುಂತಾದ ವಿಷಯಗಳಿಗೆ ಸಂಬಂಧಿಸಿದ ಲೇಖನಗಳು, ಚಿಂತನ, ಪುಸ್ತಕ ಪರಿಚಯ, ಭಕ್ತಿಗೀತೆ ಇತ್ಯಾದಿಗಳು " ಶ್ರೀಧರ ಸಂದೇಶ"ದಲ್ಲಿ ಆದ್ಯತೆಯಲ್ಲಿ ಪ್ರಕಟವಾಗುತ್ತವೆ.
~ ಶ್ರೀರಾಮ ದಿವಾಣ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!