ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನದ " ಸ್ವರ್ಣವಲ್ಲೀ ಪ್ರಭಾ"
ಉತ್ತರ ಕನ್ನಡ ಜಿಲ್ಲೆ ಶಿರಸಿ ತಾಲೂಕು ಮಠದೇವಳದ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನದ ಶ್ರೀ ಭಗವತ್ಪಾದ ಪ್ರಕಾಶನ (ರಿ)ವು ಕಳೆದ ೨೮ ವರ್ಷಗಳಿಂದ ಪ್ರಕಟಿಸಿಕೊಂಡುಬರುತ್ತಿರುವ ಮಾಸಪತ್ರಿಕೆಯಾಗಿದೆ "ಸ್ವರ್ಣವಲ್ಲೀ ಪ್ರಭಾ".
ಶ್ರೀ ಶ್ರೀಮದ್ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮಿಗಳು ಪತ್ರಿಕೆಯ ಮಹಾಪೋಷಕರು. ನಾ. ಸು. ಭರತನಹಳ್ಳಿ ಪ್ರಧಾನ ಸಂಪಾದಕರು. ವಿ || ಮಹಾಬಲೇಶ್ವರ ಭಟ್ಟ ಶೇಡಿಗದ್ದೆ ಉಪಸಂಪಾದಕರು. ಆಸ್ಥಾನ ವಿದ್ವಾಂಸರಾದ ಭಾಲಚಂದ್ರ ಶಾಸ್ತ್ರಿ ಸ್ವರ್ಣವಲ್ಲೀ, ವಿ || ಶಂಕರ ಭಟ್ಟ ಉಂಚಳ್ಳಿ, ವಿ || ರಾಮಚಂದ್ರ ಶರ್ಮ ತ್ಯಾಗಲಿ ಬೆಂಗಳೂರು, ಡಾ. ಎ. ಕೆ. ಶಾಸ್ತ್ರಿ, ಡಾ || ನಿರಂಜನ ವಾನಳ್ಳಿ, ವಿ || ಉಮಾಕಾಂತ ಭಟ್ಟ ಮೇಲುಕೋಟೆ, ಪ್ರೊ. ಎಂ. ಎ. ಹೆಗಡೆ, ವನರಾಗ ಶರ್ಮಾ ಹಾಗೂ ಪ್ರೊ. ಟಿ. ಜಿ. ಭಟ್ಟ ಹಾಸಣಗಿ ಗೌರವ ಸಲಹೆಗಾರರು.
ಶ್ರೀ ಭಗವತ್ಪಾದ ಪ್ರಕಾಶನದ ಕಾರ್ಯದರ್ಶಿಗಳು "ಸ್ವರ್ಣವಲ್ಲೀ ಪ್ರಭಾ"ದ ಪ್ರಕಾಶಕರು ಮತ್ತು ಮುದ್ರಕರು. ಪ್ರಸ್ತುತ, ಪ್ರೊ. ಕೆ. ವಿ. ಭಟ್ಟ ಶಿರಸಿ ಮಹಾಸಂಸ್ಥಾನದ ಕಾರ್ಯದರ್ಶಿಗಳು. ಐ. ಎಂ. ಹೆಗಡೆ ಶಿರಸಿ ಸಹಕಾರ್ಯದರ್ಶಿಗಳು. ಶಿರಸಿಯ ದಿ ಚೇತನಾ ಪ್ರಿಂಟಿಂಗ್ ಆ್ಯಂಡ್ ಪಬ್ಲಿಶಿಂಗ್ ಕೋ - ಓಪರೇಟಿವ್ ಸೊಸೈಟಿ ಲಿಮಿಟೆಡ್ ನಲ್ಲಿ ಪತ್ರಿಕೆ ಮುದ್ರಣವಾಗುತ್ತಿದೆ.
೨೬ ಪುಟಗಳ ಪತ್ರಿಕೆಯ ಬಿಡಿ ಸಂಚಿಕೆಯ ಬೆಲೆ ೧೫ ರೂಪಾಯಿಗಳು. ವಾರ್ಷಿಕ ಚಂದಾ ಮೊತ್ತ ೧೫೦/-, ಮೂರು ವರ್ಷಕ್ಕೆ ೪೨೦/-, ಐದು ವರ್ಷಕ್ಕೆ ೭೦೦/- ಮತ್ತು ಆಜೀವ ಚಂದಾ ಮೊತ್ತ ೨೦೦೦/- ರೂಪಾಯಿಗಳು. ಧಾರ್ಮಿಕ ಲೇಖನಗಳು, ತತ್ವ ಚಿಂತನೆಯ ಬರೆಹಗಳು, ಕ್ಷೇತ್ರ ವಾರ್ತೆಗಳು ಇತ್ಯಾದಿಗಳು ಆದ್ಯತೆಯಲ್ಲಿ ಪ್ರಕಟವಾಗುತ್ತವೆ.
~ ಶ್ರೀರಾಮ ದಿವಾಣ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!