ರಾಮಚಂದ್ರಾಪುರ ಮಠದ "ಧರ್ಮ ಭಾರತೀ"

ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕು ಹೊಸನಗರದ ಶ್ರೀ ರಾಮಚಂದ್ರಾಪುರ ಮಠದ ಧರ್ಮಚಕ್ರ ಟ್ರಸ್ಟ್ ನ ಅಧೀನ ಸಂಸ್ಥೆಯಾದ ಬೆಂಗಳೂರು ಗಿರಿನಗರದಲ್ಲಿರುವ ಭಾರತಿ ಪ್ರಕಾಶನವು ಪ್ರಕಟಿಸುವ ಮಾಸಪತ್ರಿಕೆಯಾಗಿದೆ "ಧರ್ಮ ಭಾರತೀ".

ಕಳೆದ ೨೬ ವರ್ಷಗಳಿಂದ ಪ್ರಕಟವಾಗುತ್ತಿರುವ ೪೪ ಪುಟಗಳ "ಧರ್ಮ ಭಾರತೀ"ಯ ವಾರ್ಷಿಕ ಚಂದಾ ೫೦೦ ರೂಪಾಯಿಗಳು. ಪಂಚ ವಾರ್ಷಿಕ ಚಂದಾ ೨,೩೪೫/- ರೂಪಾಯಿಗಳು. ಶ್ರೀ ರಾಮಚಂದ್ರಾಪುರ ಮಠದ ಪ್ರಶಾಸನಾಧಿಕಾರಿಗಳಾದ ಸಂತೋಷ ಹೆಗಡೆ ಪ್ರಕಾಶಕರು. ಕೃಷ್ಣಾನಂದ ಶರ್ಮಾ ಬಂಗಲಗಲ್ಲು ಸಂಪಾದಕರು. ಗಣೇಶ ಕೃಷ್ಣ ಹೆಗಡೆ ಉಪಸಂಪಾದಕರು. ಸಾಹಿತ್ಯ ಸಹಕಾರ ಸುರೇಶ್ ಭಟ್  ಅಡಗೋಡಿ ಅವರದು. ನವನೀತ ಭಟ್ ಕೆ. ಎನ್. ಪತ್ರಿಕಾ ವಿನ್ಯಾಸಕರು.

"ಧರ್ಮ ಭಾರತೀ" ಯ ಬಹುತೇಕ ಪುಟಗಳು 'ಭಾವ ರಾಮಾಯಣ' ಮೀಸಲಾಗಿದೆ. ೨೦೨೩ರ ಮಾರ್ಚ್ ಸಂಚಿಕೆಯಿಂದ "ಧರ್ಮ ಭಾರತೀ" ಯ ಜೊತೆಗೆ ಪ್ರತ್ಯೇಕವಾಗಿ "ಶ್ರೀ ಸಂಸ್ಥಾ" ಎಂಬ ಹೆಸರಿನಲ್ಲಿ ಪುರವಣಿ ಪ್ರಕಟವಾಗುತ್ತಿದೆ. ೫೨ ಪುಟಗಳ ಈ ಪುರವಣಿಯಲ್ಲಿ ಸಂಪಾದಕೀಯ, ಪ್ರಧಾನ ವಾರ್ತಾ, ವಾರ್ತಾ, ನಮ್ಮ ಸಂಸ್ಥೆಗಳು, ಸುಸಂಸ್ಥಾ, ಸೇವಾಭಾವ, ಆಮಂತ್ರಣ, ವಿವಿವಿ ವೃತ್ತಾಂತ, ಪ್ರಕಟಣೆ, ನಮ್ಮ ಪುಸ್ತಕ, ಶ್ರೀಯಾತ್ರಾ, ಸೇವಾವಕಾಶ ಇತ್ಯಾದಿ ಅಂಕಣಗಳಿವೆ.

~ ಶ್ರೀರಾಮ ದಿವಾಣ