ಎನ್ನ ಒಲವಿನ ರಾಣಿ 

ಕುಸುಮ ಬಾಲೆಯೆ ಸವಿಯೆ

ನನ್ನೊಳಗೆ ನೀನೆ ಎಂದೂ

ನಿನ್ನ ರೂಪದ ಒಳಗೆ 

ನನ್ನ ಭಾವನೆ ಇರಿಸಿ 

ಮಧುವನ್ನು ಪಡೆದೆ ಇಂದೂ

ಮೋಹಕದ ನಗೆಯೋಳೆ 

ವೈಯಾರ ನಡೆಯವಳೆ

ಭಿನ್ನಾಣ ಚೆಲುವ ಬೀರಿ

ಅತ್ತಿತ್ತ ಓಡುತಲಿ 

ಕಣ್ಮುಂದೆ ಸುಳಿವವಳೆ

ಗೆಲುವಿಂದ ಮನವ ಸೇರಿ

ಕಾಲ್ಗೆಜ್ಜೆ  ನಾದದಲಿ 

ಹೃದಯವನು ಕದ್ದೋಳೆ

ಕೈಹಿಡಿದು ನಗುವು ಸೇರೆ

ಹೊಂಗನಸ ದೋಣಿಯಲಿ 

ಕುಳ್ಳಿರುತ ಸಾಗುತಲಿ

ಮೈ ಸವರೆ ಒಲವ ಧಾರೆ

ಹತ್ತೂರ ಸುತ್ತುತಲೆ 

ಕುಳಿತಿಹೆವು ಒಂದು ಕಡೆ

ಬೆಸುಗೆಯೊಳು ಮುದವ ನೀಡಿ

ಹೀಗೆ ಸಾಗಲಿ ಬದುಕು 

ನಮ್ಮಿಬ್ಬರಾ ನಡುವೆ 

ಕೊನೆತನಕ ಮಧುರ ಬೇಡಿ

-ಹಾ ಮ ಸತೀಶ ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ