ಯಾರೋ ಹಾಕಿದ ರಾಗಕ್ಕೆಲ್ಲ ತಲೆದೂಗುತಲೇ ಸಾಗುತಿಹೆ
ಮಾತು ಮೌನದ ಭಿಕ್ಷೆಯ ನಡುವೆ ಮನಬಾಗುತಲೇ ಸಾಗುತಿಹೆ
ಯಾತ್ರೆಯ ನಡುವಿನ ಮತ್ಸರ ಬೆಂಕಿಗೆ ಮತ್ತದೆ ರೋಷವು ಉಕ್ಕುತಲಿ
ಪುಣ್ಯದ ಕೆಲಸಕೆ ಬಾರದ ಸವಿಯಿರೆ ತನು ಸೋಲುತಲೇ ಸಾಗುತಿಹೆ
ಧಗೆಯೊಳು ಕುಳಿತಿಹ ರೂಪವು ಇಂದು ಕ್ಷಣದೊಳು ಹೀಗೆ ಚಡಪಡಿಸಿ
ಬಾರದ ಬಯಕೆಯ ಕಲ್ಲನು ಕೆತ್ತಿ ಚಿತ್ತ ಕೆಡಿಸುತಲೇ ಸಾಗುತಿಹೆ
ಬದುಕಿನ ನಿಯಮವ ಕಲಿಯದೆ ಇದ್ದರೆ ಅರಿವದು ಹೇಗೆ ಕಾಣುವುದು
ಹೋರಾಟದ ಕೊನೆ ಮೀರದೆ ಇರಲು ಅರಿವಾಗುತಲೇ ಸಾಗುತಿಹೆ
ಈಶನ ನಡೆಯೊಳು ಕ್ಲೇಶವು ಬಾರದೆ ಸುಂದರ ರೂಪವ ತೋರುತಲಿ
ಹರುಷದ ಬೆಸುಗೆಯ ನಂಬಿಕೆಯೊಳಗೆ ಮನಸಾಗುತಲೇ ಸಾಗುತಿಹೆ
-ಹಾ ಮ ಸತೀಶ ಬೆಂಗಳೂರು
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!