ನೀ ನಲ್ಲೆ  ನೀ ಎಲ್ಲೆ, ಆ ಬಾನಿನಲ್ಲಿ ಕುಳಿತ,ತಾರೆಯಂತೆ ಸಖಿ 

ನಾ ನಲ್ಲೆ  ನನ್ನಲ್ಲೆ, ಇಲ್ಲೆ ಭುವಿಯಲಿರುವ ಬಂಡೆಯಂತೆ ಸಖಿ


ನಿನ್ನ ಮೌನ ಮುನಿಸಿನೆಡೆ,ಮನವು ಹೀಗೆ ಮುದುಡಿತು ಯಾಕೆ 

ಮಾತು ತಪ್ಪಿದವರ ಬದುಕು, ಹರಿದು ಎಸೆದ ಹಾಳೆಯಂತೆ ಸಖಿ 


ಹೊತ್ತು ಮೀರಿದ ಮೇಲೆ, ಒಲುಮೆ ಸವಿ ಮೂಡುವುದೇ ಹೇಳು 

ಕದ್ದು ಮುಚ್ಚಿದ ಬಯಕೆಯು,ಹನಿ ಹನಿಯ ಮಳೆಯಂತೆ ಸಖಿ


ಹೊತ್ತಿ ಆರಬಹುದು,ಉರಿಯದೇ ಮಿಲನದ ಕ್ಷಣಗಳು ಹಾಗೆ 

ಬಂದಿರದ ಕಾಮನೆಗಳೇ, ಎಂದೆಂದಿಗೂ ಮಡಿಯಂತೆ ಸಖಿ


ಕರುಳು ಬೇಯುವ ಸಮಯ, ಬಳಿಯಲ್ಲಿ ಯಾರಿಹರು ಈಶ 

ಬಾಳು ಸರಿಯಾಗಲೇ ಬೇಕೀಗ, ಹಿರಿಯರ ನುಡಿಯಂತೆ ಸಖಿ

-ಹಾ. ಮ ಸತೀಶ ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ