ಹೊನ್ನ ಬಣ್ಣಕೆ ಜಗದ ಪ್ರಕೃತಿಯು
ನಲಿಯುತಾ ತಾನ್ ಕುಣಿಯಿತು
ಮತ್ತೆ ಮಾವಿನ ಚಿಗುರ ತೋರಣ
ಸವಿಯ ಗಾಳಿಗೆ ತೊನೆಯಿತು
ನೀರ ಹನಿಗಳು ಎಲೆಯ ಮೇಲ್ಗಡೆ
ಚುಂಬನದಾ ಮಳೆಗೆರೆಯಿತು
ನಾಚಿ ಹೋಗಿಹ ಪುಷ್ಪ ಕುಲಗಳು
ಮೋಹದಾಳದಿ ನಲುಗಿತು
ಚಿಣ್ಣರೆಲ್ಲರ ಧ್ವನಿಯ ಕಲರವ
ಸುತ್ತ ಓಣಿಲಿ ಹರಡಿತು
ಪಕ್ಷಿ ಸಂಕುಲ ಕೋಟೆ ಸುತ್ತುತ
ಹರುಷ ಪಡುತಲಿ ಹಾರಿತು
ಮೂಲೆ ಕಂಬವ ಹಿಡಿದು ಮಲ
ಗಿದ ರೈತನೆದ್ದನು ಬೇಗದಿ
ಹೆಗಲ ಮೇಲೆ ನೊಗವನಿಟ್ಟನು
ಉಳುಮೆಗೊರಟನು ಚಂದದಿ
ತಂಪು ಮನಸ್ಸಲಿ ಬಂದ ಕಿರಣವು
ಜಲವ ತಬ್ಬುತ ಮಲಗಿತು
ಮನೆಯ ಒಳಗಿನ ಮಧುರ ಸ್ವರವದು
ಕಿಟಕಿ ಹೊರಗದು ಇಣುಕಿತು
ಮೌನ ಮುರಿಯುತ ಮಾತು ಉಲಿ
ಯಿತು ಮನವು ಹಾಡುತ ಸಾಗಲಿ
ಜಗವು ಹೀಗೆ ನಗುತ ನಲಿಯಲಿ
ಪ್ರೇಮ ಸೌಧವ ತುಂಬಲಿ
-ಹಾ ಮ ಸತೀಶ ಬೆಂಗಳೂರು
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!