ಈ ವಾರ ಬಹಳ ಜನಪ್ರಿಯವಾದ ಜಾನಪದ ಗೀತೆಯೊಂದನ್ನು ಆರಿಸಿ ತಂದಿದ್ದೇವೆ. ಇದನ್ನು ಓದಿದಾಗ ಎಲ್ಲರ ಕಣ್ಣಿನಲ್ಲಿ ನೀರು ಜಿನುಗುವುದು ಖಂಡಿತ.

ತಾಯಿ ಸತ್ತ ಮೇಲೆ

ತಾಯಿ ಸತ್ತ ಮೇಲೆ ತವರಿಗೆಂದೂ ಹೋಗಬಾರದವ್ವ

ನಾಯಿಗಿಂತ ಕಡಿಯಾಗಿ ಹೋಯಿತು ನನ್ನ ಬಾಳ ಜೀವ

ಬಾಳ ಮಕ್ಕಳ ಬಡತನ ಸಂಸಾರ ನನ್ನ ನಸೀಬದಾಗ 

ಬರೆದು ಕಳಿಸ್ಯಾನ ಏನು ಮಾಡಲಿ ಕರುಣೆ ಇಲ್ಲ ಶಿವಗ

ಸಿರಿಯು ತವರಿಗೆ ತುತ್ತು ಕೂಳಿಗಾಗಿ ನಾ ಹೋಗಿರಲಿಲ್ಲ

ಕರುಳು ತಡೆಯದೆ ಅಣ್ಣನ ನೋಡಲು ಹೊರಟು ಬಂದೆನಲ್ಲ

ಬಗಲಾಗ ಒಂದು ಕೈಯಾಗ ಒಂದು 

ಕೂಸನು ಕಟಗೊಂಡು ಹರಿದಾರಿಹತ್ತು

ಉಸಿರು ಹಾಕುತ ಬಂದೆನು ನಡಕೊಂತ

ತವರಿನ ಹೊಸ್ತಿಲ ತುಳಿಯುವದರೊಳಗ

ಅಣ್ಣನ ಹೆಂಡತಿ ಕಂಡರೂ ಕಾಣದಾಂಗ

ಒಳಗೆ ಹೋದರು ಕರೆಯದೆ ಕರೆಯುವ ಗತಿ ಇಲ್ಲ

ನೆತ್ತಿಯ ಮೇಲೆ ಬಿಸಿಲು ಬಂದಿತು

ಮಕ್ಕಳು ಚಡಪಡಿಸಿ ನೀರಿಗಾಗಿ ಕಣ್ಣೀರು ಹಾಕುತ ಅತ್ತಾವ ಪುಟಪುಟಿಸಿ,

ಹುಟ್ಟಿ ಬೆಳೆದ ನನ್ನ ತವರೂರ ಮನಿಯಾಗ ನೀರಿಗೆ ಗತಿಯಿಲ್ಲ

ಬಾ ನನ್ನ ಮಗಳ ಯಾವಾಗ ಬಂದಿಯಂತ ಕರೆಯುವ ಕರುಳಿಲ್ಲ

ಕೆಲಸದ ಮೇಲೆ ಹೋಗಿದ್ದ ಅಣ್ಣಯ್ಯ ಮನೆಗೆ ಬಂದು

ದಿಕ್ಕು ಇಲ್ಲದ ತಂಗಿಯ ನೋಡಿ

ಬಂದ್ಯಾಕ ಅವಕರೆದಾ ಮನಸಿನವಳಗೆ ಕಾಲಿಡಬೇಡಂದರು

ಹಸಿದ ಮಕ್ಕಳ ನೋಡಿ ಅಣ್ಣನ ಮನೆಯೊಳು

ಒಳಗೆ ಹೋದೆನು ಅಣ್ಣನ ಜೊತೆಗೂಡಿ

ಒಳಗ ಬಂದ ಅಣ್ಣನ ಹೆಂಡತಿ ಕಿವಿಯೊಳು ತುಂಬ್ಯಾಳು । 

ಬಾಯಿ ಮುಚ್ಚಿ ಬರ್ರಿ ಸುಮ್ಮನೆ ಇರುವಂತೆ ಕಿವಿಯೊಳು ತುಂಬ್ಯಾಳು ।

ಗಂಡ ಹೆಂಡಿರ ಮುಸರಿಯ ಮಕ್ಕಳು ಮುಸರಿ ಉಣ್ಣುವಾಗ ।

ತಾಯಿ ನೆನಪಾಯ್ತು

ಅಣ್ಣನ ಮುಂದೆ ಕಣ್ಣೀರು ತೆಗೆದು

ಅವ್ವ ಸಾಯುವಾಗ ಒಬ್ಬಾಕಿ ತಂಗಿ

ಚೆಂದಾಗಿ ನೋಡಿಕೊ ಅಂತ ಹೇಳಿದಾಗ

ಮದುವೆಯೂ ಕೆಲ ದಿನಗಳವರೆಗೆ ಚೆಂದಾಗಿ ನೋಡಿದ 

ಮಡದಿ ಬಂದು ಮೂರು ತಿಂಗಳೊಳಗೆ ತಂಗಿ 

ಮರೆತು ಬಿಟ್ಟು ಕೀಳು ಕುಲದನ್ನ

ಮಕ್ಕಳಾಂಗ ಅತ್ತಿಗೆ ನಮ್ಮನ್ನು ನೋಡಿದಳೆ

ಜೋಡ ಹಕ್ಕಿಹಾಂಗ ನಾವು ಅಣ್ಣಯ್ಯ

ಕೂಡಿ ಬೆಳೆದ ಮಾತು ತುಪ್ಪ ಹಾಕಿ ಕೈಮಾಡಿ ಉಣಿಸಿದ

ನೆನಪಾಯ್ತು ತಾಯಿ ಇದ್ದರ ತಂಗಿಗೆ

ಈ ಗತಿ ಬರುತ್ತಿತ್ತೇನೀಗ ಅಣ್ಣ ಬಿಟ್ಟರೂ ನಾ ಹೆಂಗ ಮರಿಲವ್ವ

ನಮ್ಮಂತ ಬದುಕಿರುವ ಅಣ್ಣನ ಕರುಣಾಂಗ

ನೀರ ನಿನಗೇನುವೆನೆಂದ

ಅಣ್ಣ ಬಿಟ್ಟರೂ ನಾ ಹೆಂಗೆ ಬಿಡಲವ್ವ ಕರುಳಿನ ಸಂಬಂಧ ॥

(ಜಾನಪದ ಗೀತೆಗಳು ಸಂಗ್ರಹಿತ)