ಈ ವಾರ ನಾವು ಆಯ್ದು ಕೊಂಡ ಕವನ

ನನ್ನ ಗಂಡ ತಿರಸಟ್ಟಿ ಬಾಳವ್ವ

ನನ್ನ ಗಂಡ ತಿರಸಟ್ಟಿ ಬಾಳವ್ವ ಎಡವಟ್ಟಿ

ಹೊಡಿತಾನ ಹಗಲೆಲ್ಲಾ ಮೂಲಿಗಾಕಿ

ನಾ ಅಂತ ತಡದೇನಿ ನೆಟ್ಟುಳ್ಳಾಕಿ

ಸಿಟ್ಟ ಬಂದ್ರೆ ಬಾಳ ಕೊಟ್ಟಿ

ಒಡಿತಾನ ತಲಿಪಟ್ಟಿ

ಬಾಳ ಬಾಳ ಬಿರಿ ಅವನ ಕೈಯಾಗ

ಸತ್ತ ಹುಟ್ಟಿ ಬರತೇನ ದಿನಾ ಬೆಳಗ

ಜಗಳಂದ್ರ ಬಾಳ ಜೂಟ

ಈಗ ಹುಲಿಹಾಂಗ ಥೇಟ

ಯಾಂವಾರ ಅಡಮುಟ್ಟಿ ನ್ಯಾಯ ತಗದಾನ

ಎತ್ತಿ ಒಗಿತಾನ ಕಲ್ಲಪಡಿಮ್ಯಾಗ

ಯಾತರದೇನ ದರಕಾರ ಇಲ್ಲ

ಮಾತು ರೀತಿ ಬಾಳ ಬಿರಸ

ನಯಾ ನಾಜೂಕ ಒಂದೂ ಇಲ್ಲ ಏನ ಹೇಳ್ಲಿ

ಕೂಡಿದ ಮಂದ್ಯಾಗ ಕುರುತಾನ ಬಾಮಳ್ಳಿ  

ಗಂಡ ಹೆಂಡಿರ ಮಾತು ಅಂದ್ರೆ

ಅಂಗ್ಡ್ಯಾಗಿನ ಜಿನಸ ಅಲ್ಲ

ಎಲ್ಲಾರ ಮುಂದ ಇಟ್ಟಿಟ್ಟ ತೋರಿಸಾಕ

ಮರ್ಯಾದಿ ಸಂಗಾಟ ಮಾತ ಇರಬೇಕು

ಹಿಂತಾ ಮಾತಿನ ಗುರುತ

ನಮ್ಮಾಂವ್ಗ ಏನ ಗೊತ್ತ

ಕುಂತಲ್ಲಿ ನಿಂತಲ್ಲಿ ಬಿಡತಾನ ಬಾಯಿ ಸೈಲ

ಮನಿ ಹಾರಿಹೋಗುವಂಗೆ ಬಟಾ ಬೈಲ

ಮಂದಿ ಹಾಂಗ ಅವರಿ ತೊಟ್ಟ

ಚೆಂದದಿ ತಿರಗಾಂವಲ್ಲ

ಹರಕಂಗಿಗೆ ಹದಿನಾರ ಗಂಟಾಕಿ

ತೊಡತಾನ ಅವಂಗಿಲ್ಲ ಬ್ಯಾಸರಕಿ

ಸಂಸಾರದಾಗೇನೈತಿ

ಉಂಡುಟ್ಟ ಹೋಗೋದೈತಿ

ನಮಗಿಲ್ಲ ಹಂತಾದೇನ ಬಡತಾನ

ಹಾಗಂದ್ರ ಹಲ್ಲು ಮುರಿದೇನಂತಾನ

ಅಗಸ್ಯಾನೆಲ್ಲಾ ಗುಂಡಾ

ಉಳಸಾಂವ ನನ ಗಂಡಾ ಆಗ ಈ ಬ್ಯಾಸರಕಿ ಬೈಲಾಗಿ

ಪ್ರೀತಿ ತೊಳೆಯತೈತಿ ಮೇಲಾಗಿ

ನನಗಂಡ ತಿರಸಟ್ಟಿ ಬಾಳವ್ವ ಎಡವಟ್ಟ

ಇದ್ದರ ಇರಲೇಳ ಅಂವ ಪಾಡ

ಏನೆಂದ್ರು ಅಳಬುರುಕ ಗಂಡ ಬ್ಯಾಡ

(ಜಾನಪದ ಗೀತೆಗಳು ಸಂಗ್ರಹಿತ)