ಮುಂಗೊಂಡಾದ ಮಾದೇಶ್ವರಗೆ ಶರಣು
ಮುಂಗೊಂಡಾದ ಮಾದೇವನವರು
ಮುಂದಾನ ಪೂಜೆಗೆ ಬರುವಾಗ
ಹಣ್ಣು ಕಾಯಿ ಸಾಂಬ್ರಾಣಿಯ ಗಮನಂ
ಮಂಜುಗವಿದಾವೆ ।
ಬೆಟ್ಟದಾಮಾದೇವ ಬರುವಾಗ
ಗುಡ್ಡುಕಲ್ಲು ಗುರುಗುಟ್ಟಿದವೋ
ಹುಲಿಯ ಮೇಲೆ ಮಾದೇವ ಬರುವ
ಮಾಯಾ ನೋಡಯ್ಯ ॥
ಮುಂಗೊಂಡಾದ ಮಾದೇಶ್ವರಗೆ
ಶರಣು ಶರಣಯ್ಯ
ಮಾಯಾಕಾರ ಮಾದೇಶ್ವರಗೆ ಶರಣು ಶರಣಯ್ಯ ॥
ಕಾಣಿಕೆ ತಂದೀವ್ನಿ
ಸ್ವಾಮಿ ಕಾಣೆನಲ್ಲೊ ಮಾದೇಶ್ವರನಾ
ಕಾಣಿಕೆ ನೀಡಿ ಧೂಪವ ಹಾಕಿ
ಬೇಡುವೆ ಮಾದೇವನಾ ॥
ಗಂಡುಲಿ ಮ್ಯಾಗಿನ ಗದ್ದಿಗೆಯೋ
ಸ್ವಾಮಿ ಹಿಂಡುಲಿ ಮ್ಯಾಲಿನ ನಿರ್ದಾದಿಯೋ
ಎತ್ತಿದರು ದುಂಡು ಮಾದೇವನ
ಗಂಡು ಹುಲಿಯಮ್ಯಾಲೆ ॥ ಮುಂಗೊಂಡಾದ ॥
ಕಾಡು ಪಾರುವಾಳನಕ್ಕಿ
ಕನ್ನನವರು ಮರಿದುಂಬಿಗಳೋ
ಲಾವಾಳನಕ್ಕಿ ಪಿಕ್ಕಿದುಂಡುಯ್ಯಾನು
ಕೂಗಿಕರುದಾವೆ
ಕೋಗಿಲೆ ಎದ್ದು ಕೋಬೇನೇರಿ
ಕೂಗುತಾವೊ ಮಾದೇಶ್ವರನಾ
ರಾಗವೆತ್ತಿದುಂಡು ಮಾದೇವನ
ಕರೆಯುತಾವೆ ನೋಡಿ ॥ ಮುಂಗೊಂಡಾದ॥
ಎಲ್ಲಾ ರೂಪವು ತಾನಂತೆ
ಶಿವ ಎಲ್ಲೆಲ್ಲಿಯೂ ತಾನಿಹನಂತೆ
ಅಲ್ಲಲ್ಲರಸುತ ಗುಡಿಗಳ ತಿರುಗುವ
ಜನಗಳ ಕಣ್ಣಿಗೆ ಕಲ್ಲಂತೆ
ಕಣ್ಣಿಲ್ಲದವರಿಗೆ ಕಣ್ಣಂತೆ ಶಿವ
ಕಣ್ಣಿಗೆ ಕಣ್ಣಾಗಿಹನಂತೆ
ಎಲ್ಲಾರ ಜೀವಾಗಿ ಮಾದಪ್ಪ
ಬಣ್ಣ ಬಣ್ಣವಾಗಿಹನಂತೆ ॥ ಮುಂಗೊಂಡಾದ॥
ಆರುಮಲೆ ಏಳುಮಲೆ ಗುಂಡುಮಲೆ
ಗುಲಗಂಜಿ ಮಲೆ ಎಪ್ಪತ್ತೇಳು ಮಲೆ ಒಳಗೆ
ನಲಿದು ನಾಟ್ಯನಾಡತಕ್ಕಂತ
ನಮ್ಮ ಮಲೆ ಮಾದೇಶ್ವರನ ಪಾದಕ್ಕೊಂದು ಸಾರಿ
ಉಘೇ ಅನ್ನಿ… ॥
(ಜಾನಪದ ಗೀತೆಗಳು ಸಂಗ್ರಹಿತ)
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!