ಜಾನಪದ ಗೀತೆಗಳು ಮಾಲಿಕೆಯಲ್ಲಿ ಈ ವಾರ ‘ಕೋಲು ಕೋಲಣ್ಣ’ ಎನ್ನುವ ಜನಪ್ರಿಯ ಗೀತೆಯೊಂದನ್ನು ಆರಿಸಿ ಪ್ರಕಟ ಮಾಡಿದ್ದೇವೆ.
ಕೋಲು ಕೋಲಣ್ಣ
ಕೋಲು ಕೋಲಣ್ಣ ಕೋಲು ಕೋಲೆ
ಕೋಲಣ್ಣ ಕೋಲೆ
ಕೋಲು ಕೋಲಣ್ಣ ಕೋಲು ಕೋಲೆ ॥
ಮಲ್ಲಯ್ಯನಿರುವುದು ಇಲ್ಲಿಗೆ ಗಾವುದ
ಮಲ್ಲಯ್ನ ಮಡದಿ ಮರುಗಮ್ಮ । ಕೋಲಣ್ಣ ಕೋಲೆ
ಮಲ್ಲಯ್ಯನಾ ಮಡದಿ ಮರುಗಮ್ಮನಿರುವುದು
ಕಲ್ಲುಮಾಳಿಗೆ ಕೈಲಾಸ ॥
ಕೋಲು ಕೋಲಣ್ಣ ಕೋಲು ಕೋಲೆ
ಮಲ್ಲಯ್ಯಶಿವ್ನೆ ನೀವೆಲ್ಲಿ ಬೀಡಿಗೆ ಬಿಟ್ಟೆ
ಮಲ್ಲೀಗೆ ಬೆಳೆವೊ ಮತಿಘಟ್ಟ । ಕೋಲಣ್ಣ ಕೋಲೆ
ಮಲ್ಲೀಗೆ ಬೆಳೆವೊ ಮತಿಘಟ್ಟರಾ ಮುಂದೆ
ಬಯಲಾಗೆ ಬಿಟ್ರು ಪರುಸೇಯ ॥
ಕೋಲು ಕೋಲಣ್ಣ ಕೋಲು ಕೋಲೆ
ಒಕ್ಕಾಲ ಹುರಿಗೆಜ್ಜೆ ಒಕ್ಕಾಲ ಕಿರುಗೆಜ್ಜೆ
ಚೊಕ್ಕ ಬೆಳ್ಳಿಲಿ ಮಕುರಂಬ । ಕೋಲಣ್ಣ ಕೋಲೆ
ಚೊಕ್ಕ ಬೆಳ್ಳಿಲಿ ಮಕುರಂಬ ಹಾಕೀದಕುದುರೆ
ಹೊಕ್ಕಾವ್ ಮಾನೌಮಿ ಫೌಜೀಗೆ ॥
ಕೋಲು ಕೋಲಣ್ಣ ಕೋಲು ಕೋಲೆ
ಆನೆ ಸುಂದರಾಂಗವಾಗಿ ಅಂಗಳಾದ ಗೈದಾವೆ
ಜಾಣ ತಾನೇಕೆ ಹೊರಡಾನೇ । ಕೋಲಣ್ಣ ಕೋಲೆ
ಜಾಣ ತಾನೇಕೆ ಹೊರಡಾನೇಳೋ ನಿನ್ನ
ದೋಣು ಲಾಲಿಸಿ ಕರೆದಾವೆ ॥
ಕೋಲು ಕೋಲಣ್ಣ ಕೋಲು ಕೋಲೆ
(ಜಾನಪದ ಗೀತೆಗಳು ಸಂಗ್ರಹಿತ)
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!