ಈ ವಾರ ಆಯ್ಕೆ ಮಾಡಿದ ಹಾಡು ಬಹಳಷ್ಟು ಖ್ಯಾತಿ ಪಡೆದಿರುವಂತದ್ದು. ಬಹುತೇಕರು ಆಲಿಸಿದ್ದರೂ ಅನೇಕರಿಗೆ ಇದರ ಪರಿಚಯ ಇಲ್ಲ. ಶಾಲಾ, ಕಾಲೇಜು, ಯುವ ವೇದಿಕೆ, ಜಾನಪದ ಸ್ಪರ್ಧೆಗಳಲ್ಲಿ ಈ ಹಾಡು ಬಹಳ ಪ್ರಚಲಿತ.
ಚೆಲುವಯ್ಯ ಚೆಲುವೊ ತಾನಿ ತಂದನ
ಚೆಲುವಯ್ಯ ಚೆಲುವೋ ತಾನೆ ತಂದನ್ನ
ಚಿನ್ಮಯರೂಪೇ ಕೋಲಣ್ಣ ಕೋಲೆ
ಬೆಟ್ಟದ ಮ್ಯಾಗಳ್ ಜಲ್ಲೆ ಬಿದಿರು
ಬೇಲಿ ಮ್ಯಾಗಳ್ ಸೋರೆ ಬುರುಡೆ
ಲೋಲು ಕಿನ್ನರಿ
ನುಡಿಸೋನ್ ಯಾರಯ್ಯ ॥ ಚೆಲುವಯ್ಯ…
ಲೋಲು ಕಿನ್ನರಿ ನುಡಿಸುತ್ತಾನೆ
ಕೇರಿ ಕೇರಿ ತಿರುಗುತ್ತಾನೆ
ನಮ್ಮ ಕೇರೀಗ್ ಯಾಕೆ ಬರುವಲ್ಲ್ಯೊ ॥ ಚೆಲುವಯ್ಯ…
ನಮ್ಮ ಕೇರಿಗ್ ಬಂದರೀಗ
ಕರಿಯ ಕಂಬ್ಳಿ ಗದ್ದೇನ್ ಹೂಡಿ
ತಂದು ಕೊಡುವೇನ್ ಗಂಧ ವೀಳ್ಯವಾ ॥ ಚೆಲುವಯ್ಯ…
ಗಂಧನಾದ್ರೂ ಪೂಸಿಕೊಳ್ಳಿ
ವೀಳ್ಯನಾದ್ರೂ ಮೆದ್ದುಕೊಳ್ಳಿ
ಬಂದ ಕಾರ್ಯ ಹೇಳಿ ದಮ್ಮಯ್ಯ ॥ ಚೆಲುವಯ್ಯ…
ಬಂದ ಕಾರ್ಯ ಹೇಳುವುದಕ್ಕೆ
ಮಂತ್ರಿ ಪ್ರಧಾನಿ ಬೇಕು
ಕೂದುವ ಮನೆಯ ತೋರ್ ಹೆಣ್ಣೆ ॥ ಚೆಲುವಯ್ಯ…
ಬ್ಲಾಕ್ ಬಜಾರಿ ಮರ
ಹಿತ್ಲಲ್ ಕಿತ್ತಳೆ ಮರ
ಕೋಟೆ ದಾಟಿದರ್ ಬಾಕ್ಲು ನಮ್ಮನೆ ॥ ಚೆಲುವಯ್ಯ…
ಸುತ್ತಮುತ್ತ ಸೂರೀ ತಾನ
ನಟ್ಟ ನಡುವೆ ಸುಂಗ್ರದ್ ತ್ಯಾವ
ಕೋಟೆ ದಾಟಿದರ್ ಬಾಕ್ಲು ನಮ್ಮನೆ ॥ ಚೆಲುವಯ್ಯ...
ಕರಿಯ ಮುಖದ ಗೆಳೆಯ ನೀನು
ಕಸ್ತೂರಿ ರುಮಾಲುದೋನೆ
ಮಸೂತಿ ಕೆಳಗಿತ್ ನಮ್ಮನೇ ॥ ಚೆಲುವಯ್ಯ...
ಆಗದೋನೆ ಭೋಗದೋನೆ
ನಾಗರ ನಡು ಕಟ್ಟಿದೋನೆ
ಕೋಗಿಲಂಗೆ ಕೂಗುತೀಯಲ್ಲೊ ॥ ಚೆಲುವಯ್ಯ...
ನನ್ನ ನಿನ್ನ ಮನೆಯ ಮುಂದೆ
ಸಣ್ಣದೊಂದು ಬೇವಿನ ಮರ
ಸಂಜೇಲ್ ಮುಂಜೇಲ್ ಬಂದು ಹೋಗಯ್ಯ ॥ ಚೆಲುವಯ್ಯ...
ಊರಿಗಂತ ನೀನು ಬಾರೊ
ನೀರಿಗಂತ ನಾನು ಬರ್ತೀನ್
ಕುಂತು ನಿಂತು ಮಾತನಾಡೋಣ ॥ ಚೆಲುವಯ್ಯ...
ಕಟ್ಯಾನ ಕಠಾರಿ ಬಾಕು
ಇಕ್ಯಾನ್ ಮರವಿನ ಜೋಡ
ಹೊರಟಾನ್ ಸೂಳೇರ ಕೇರಿಗೆ ॥ ಚೆಲುವಯ್ಯ…
ಉಟ್ಟಾನ್ ಪಟ್ಟೆ ಧೋತ್ರ
ಇಕ್ಯಾನ್ ಮರವಿನ ಜೋಡ
ಹೊರಟಾನ್ ಸೂಳೇರ ಕೇರಿಗೆ ॥ ಚೆಲುವಯ್ಯ…
ಹಾಲು ನಾಯಿ ಜೂಲು ನಾಯಿ
ಊರ ಮುಂದೆ ಸಳವಾರ
ಹೇಗೆ ಹೋಗಲೂರ ಹೊರಟು ॥ ಚೆಲುವಯ್ಯ…
ಮೂಡಲ್ ಸೀಮೆ ಹೆಣ್ಣು ಕಾಣೋ
ಮುತ್ತಿನ್ ತುರಾಯಿದೋಳ್
ಕತ್ತಲ್ ಗವಿದ ನಡೆ ಕಣ್ಣಿಗೆ ॥ ಚೆಲುವಯ್ಯ…
(ಜಾನಪದ ಗೀತೆಗಳು ಸಂಗ್ರಹಿತ)
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!