ತಾವರೆಯ ಗಿಡ ಹುಟ್ಟಿ
ತಾವರೆಯ ಗಿಡ ಹುಟ್ಟಿ ದೇವರಿಗೆ ನೆರಳಾಗಿ
ನಾ ಹುಟ್ಟಿ ಮನೆಗೆ ಎರವಾದೆ ಹಡೆದವ್ವ
ನೀ ಕೊಟ್ಟ ಮನೆಗೆ ಹೆಸರಾದೆ
ಬ್ಯಾಸಗಿ ದಿವಸಕ ಬೇವಿನ ಮರ ತಂಪ
ಭೀಮಾರತಿಯೆಂಬ ಹೊಳಿ ತಂಪ । ಹಡದವ್ವ
ನೀ ತಂಪ ನನ್ನ ತವರಿಗೆ ॥
ಹೆಣ್ಣು ಹಡೆಯಲು ಬ್ಯಾಡ ಹೆರವರಿಗೆ ಕೊಡಬ್ಯಾಡ
ಹೆಣ್ಣು ಹೋಗಾಗ ಅಳಬ್ಯಾಡ । ಹಡೆದವ್ವ
ಸಿಟ್ಟಾಗಿ ಶಿವ ಬೈಬ್ಯಾಡ ॥
ಗಂಜಿಯ ಕುಡಿದರೂ ಗಂಡನ ಮನೆ ಲೇಸು
ಅಂದಣದ ಮ್ಯಾಲ ಚಿವುರಾವ । ಬೀಸಿದರೂ
ಹಂಗಿನ ತವರ ಮನಿಸಾಕ ॥
ತಾಯಿ ಮಕ್ಕಳ ದನಿಯು ತಾಳ ಬಾರಿಸಿದಂಗ
ಜೋಡ ಕಿನ್ನೂರಿ ನುಡಿದಂಗ । ಹಳಸಂಗಿ
ಹೊತ್ತೇರಿ ತಾಸೆ ಬಡಿದಂಗ ॥
ತಾಯಿಲ್ಲ ತವರಿಗೆ ಹೋಗದಿರು ನನ್ನ ಮಗಳ
ನೀರಿಲ್ಲ ಕೆರೆಗೆ ಕರಬಂದು । ತಿರುಗಾಡಿ
ಆಗ ನೋಡಿವರಾ ದುಃಖಗಳ ॥ ತಾವರೆಯ ॥
***
ಎಲ್ಲಿ ಕಾಣೆ ಎಲ್ಲಮ್ಮ
ಎಲ್ಲಿ ಕಾಣೇ ಎಲ್ಲಿ ಕಾಣೇ
ಎಲ್ಲಮ್ಮನಂಥವಳ್ನ ಎಲ್ಲಿ ಕಾಣೇ ಎಲ್ಲಿ ಕಾಣೇ
ಜಾಣಮ್ಮನಂಥವರ ಎಲ್ಲಿ ಕಾಣೇ ಎಲ್ಲಿ ಕಾಣೇ
ಬೀಸಾಕೆ ಬಂದ ಮುದುಕನ
ಮರವನ ಚೀಲ ನುಂಗಿತು
ಮಂಗಳ್ವಾರಿ ಮಾಯಾಕಾಶಿ
ಅಂಗಳದಾಗೆ ನಿಂತುಕೊಂಡು
ಗಂಡನಿಲ್ಲದ ಪುಂಡಕಾತಿ
ಎಲ್ಲಿ ಕಾಣೇ ಎಲ್ಲಿ ಕಾಣೇ … ॥
ಬಾಳೋರ ಮುಂದೆ ಬಾಕ್ಲು ಮಾಡಿದ
ಎಲ್ಲವನಂಥ ಊರೊಕ್ಕಲ ಕತ್ತಲ ಮಾಡಿದ
ಎಲ್ಲಿ ಕಾಣೇ ಎಲ್ಲಿ ಕಾಣೇ
(‘ಜಾನಪದ ಗೀತೆಗಳು’ ಸಂಗ್ರಹಿತ)
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!