ಮಾತಾಡ್ ಮಲ್ಲಿಗೆ

ಮಾತಾಡ್ ಮಾತಾಡ್ ಮಲ್ಲಿಗೆ

ಸಂಪಿಗೆ ಸೇವಂತಿಗೆ ಗುಂಪಿನಲ್ಲಿ

ಮಾತಾಡ್ ಮಾತಾಡ್ ಮಲ್ಲಿಗೆ


ಒಬ್ಬನ್ನ ಕಟ್ಟಿದ್ದೆ । ಒಬ್ಬನ ಬಿಟ್ಟಿದ್ದೆ

ಒಬ್ಬನ್ನ ಕರಕೊಂಡು ಒಳಗೋದೆ ಮಲ್ಲಿಗೆ

ಯಾವನ್ನ ಕಟ್ಟಿದ್ದೆ ಯಾವನ್ನ ಬಿಟ್ಟಿದ್ದೆ


ಯಾವನ್ನ ಕರಕೊಂಡು ಒಳಗೋದೆ ಮಲ್ಲಿಗೆ

ಹಸವನ್ನು ಕಟ್ಟಿದ್ದೆ ಕರುವನ್ನ ಬಿಟ್ಟಿದ್ದೆ

ಹಾಲನ್ನು ಕರಕೊಂಡು ಒಳಗೋದೆ ಮಲ್ಲಿಗೆ


ಒಬ್ಬನ್ನ ನೂಕಿದ್ದೆ ಒಬ್ಬನ್ನ ಹಾಕಿದ್ದೆ

ಒಬ್ಬನ ಜೊತೆಯಲ್ಲಿ ತಿರುಗಿಬಂದೆ ಮಲ್ಲಿಗೆ

ಯಾವನ್ನ ನೂಕಿದ್ದೆ ಯಾವನ್ನ ಹಾಕಿದ್ದೆ


ಯಾವನ್ನ ಜೊತೆಯಲ್ಲಿ ತಿರುಗಿಬಂದೆ ಮಲ್ಲಿಗೆ

ಕದವನ್ನು ನೂಕಿದ್ದೆ ಅಗಳಿಯ ಹಾಕಿದ್ದೆ

ದೀಪದ ಜೊತೆಯಲ್ಲಿ ತಿರುಗಿ ಬಂದೆ ಮಲ್ಲಿಗೆ


ಒಬ್ಬೊನ್ನ ಹಾಸಿದ್ದೆ ಒಬ್ಬೊನ್ನ ಹೊದ್ದಿದ್ದೆ

ಒಬ್ಬನ್ನ ಎಳಕೊಂಡು ಮಲಗಿದ್ದೆ ಮಲ್ಲಿಗೆ

ಯಾವನ್ನ ಹಾಸಿದ್ದೆ ಯಾವನ್ನ ಹೊದ್ದಿದ್ದೆ


ಯಾವನ್ನ ಎಳಕೊಂಡು ಮಲಗಿದ್ದೆ ಮಲ್ಲಿಗೆ

ಒಬ್ಬಂಗೆ ಸೀರೆಯನ್ನೇ ಕೊಟ್ಟುಬಿಟ್ಟೆ ಮಲ್ಲಿಗೆ

ಯಾವೊಂಗೆ ಕಾಲ್ಕೊಟ್ಟೆ ಯೊವೊಂಗೆ ಕೈಕೊಟ್ಟೆ


ಯಾವೊಂಗೆ ಸೀರೆಯನ್ನು ಕೊಟ್ಟುಬಿಟ್ಟೆ ಮಲ್ಲಿಗೆ

ಕಂಚಗಾರಗೆ ಕಾಲ್ ಕೊಟ್ಟೆ ಬಳೆಗಾರಗೆ ಕೈಕೊಟ್ಟೆ

ಮಡಿವಾಳಗೆ ಸೀಪ್ರೆಯನ್ನೇ ಕೊಟ್ಟುಬಿಟ್ಟೆ ಮಲ್ಲಿಗೆ

ಮಾತಾಡ್ ಮಾತಾಡ್ ಮಲ್ಲಿಗೆ

(ಜಾನಪದ ಗೀತೆಗಳು ಸಂಗ್ರಹಿತ)