ಜಾನಪದ ಗೀತೆಗಳು ಮಾಲಿಕೆಯಲ್ಲಿ ಈ ವಾರ ‘ಸರಸ್ವತಿ’ ಎನ್ನುವ ಸೊಗಸಾದ ಜಾನಪದ ಗೀತೆಯನ್ನು ಆಯ್ದು ಪ್ರಕಟಿಸಲಾಗಿದೆ.

ಸರಸ್ವತಿ

ಚಂದ್ರಗಾಮಿಯನ್ನುಟ್ಟು ದುಂಡುಮಲ್ಲಿಗೆ ಮುಡಿದು

ಅಂಗಾಳದೊಳಗ ಪಗಡೆಯ ಆಡುವ ರಂಭೆ

ಸರಸ್ವತಿ ನೀಡು ಮತಿಯ


ಹಾದಿಯ ಮನೆಯೋಳೆ ಪಾದದುಂಗುರದೋಳೆ

ಗೋದಿಯ ಸೀರೆ ನರಿಯೋಳೆ ।

ಸರಸ್ವತಿ ಓದಿಸಮ್ಮಯ್ಯ ಸವಿ ನುಡಿಯೆ ।


ಎಂಟೆಲೆ ಮಾವಿನ ದಂಟಿರುವವೋಳೆ

ಘಂಟೆಯ ಜೊತೆಗೆ ನಲಿಯೋಳ

ಸರಸ್ವತಿ ಗಂಟಲ ತೊಡರ ಬಿಡಿಸವ್ವ


ಏಳೆಲೆ ಮಾವಿನ ತಾಳಿನಲ್ಲಿರುರುವೋಳಿ

ತಾಳದ ಜೊತೆಗೆ ನೆಲೆಯೋಳ । ಸರಸ್ವತಿ

ನಾಲಿಗೇಲಿ ಮೂರಕ್ಷರವ ನಿಲ್ಲಿಸವ್ವ

***

(ಜಾನಪದ ಗೀತೆಗಳು ಸಂಗ್ರಹಿತ)